ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ

ಗುರುವಾರ , ಜೂಲೈ 18, 2019
28 °C

ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ

Published:
Updated:

ಧಾರವಾಡ: “ಪರಿಸರ ಸಂರಕ್ಷಣೆ ನಾಗರಿಕರ ಆದ್ಯ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ಅರಿತು ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಿದೆ” ಎಂದು ಶಿವಯ್ಯ ಗುಡ್ಡದಮಠ ಹೇಳಿದರು.ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಶಾಂತಿಸಾಗರ ಸಮುದಾಯ ಭವನದಲ್ಲಿ ನವಲಗುಂದದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕ ಹಾಗೂ ಗುರು ವಿರೂಪಾಕ್ಷೇಶ್ವರ ಕನ್ನಡ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ `ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ~ವನ್ನು ಉದ್ಘಾಟಿಸಿ ಮಾತನಾಡಿದರು.`ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ನಮ್ಮ ಆರೋಗ್ಯವನ್ನೂ ಸಂರಕ್ಷಿಸಿಕೊಳ್ಳಬಹುದು. ವಾಹನಗಳು ಉಗುಳುವ ದಟ್ಟವಾದ ಹೊಗೆಯು ಅತ್ಯಂತ ವಿಷಕಾರಿಯಾಗಿದ್ದು. ಇದು ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.ಈ ನಿಟ್ಟಿನಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಅವಶ್ಯಕವಾಗಿದೆ. ಅಲ್ಲದೇ  ಗ್ರಾ.ಪಂ. ಸದಸ್ಯ ಮಲ್ಲಣ್ಣ ಅಷ್ಟಗಿ ಅಧ್ಯಕ್ಷತೆ ವಹಿಸಿ, `ಪರಿಸರ ಕೆಡುತ್ತಿರುವುದು ಕೇವಲ ಕಸದಿಂದ ಅಲ್ಲ. ನಮ್ಮ ದೌರ್ಬಲ್ಯದಿಂದ ಪರಿಸರ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ಅರಿತು ಪರಿಸರ ಸಂರಕ್ಷಣೆಯತ್ತ ಗಮಹರಿಸಬೇಕಿದೆ~ ಎಂದರು.ಶಿಕ್ಷಕ ಫಕ್ಕೀರಪ್ಪ ಮಡಿವಾಳರ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಮೇಲ್ವಿಚಾರಕಿ ಪ್ರೇಮ ಪ್ರಸಾದ ಸ್ವಾಗತಿಸಿದರು. ದೇವರಾಜ ನಿರೂಪಿಸಿದರು. ಯಶೋದಾ ಮುನವಳ್ಳಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry