ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

7

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

Published:
Updated:

ಹುನಗುಂದ: ನಮ್ಮ ಸುತ್ತಲಿನ ಪರಿಸರ ವನ್ನು ಸಂರಕ್ಷಿಸಿಕೊಂಡರೆ ನೆಮ್ಮದಿಯ ಬದುಕು ನಡೆಸಬಹುದು ಎಂದು ವಿಜಯ ಮಹಾಂತೇಶ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಎಸ್.ಜಿ.ಎಮ್ಮಿ ಹೇಳಿದರು.ವಿಜಯ ಮಹಾಂತೇಶ ಕಾಲೇಜಿನಲ್ಲಿ ಹಮ್ಮಿಕೊಂಡ ಪರಿಸರ ರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.ಹಿರಿಯ ಪ್ರಾಧ್ಯಾಪಕ ಆರ್.ಸಿ. ಹೊನವಾಡ ಉದ್ಘಾಟಿಸಿದರು. ವಿ.ಮ. ಸಂಘದ ನಿರ್ದೇಶಕ ಮಹಾಂತೇಶ ಬ್ಯಾಳಿ ಅಧ್ಯಕ್ಷತೆ ವಹಿಸಿದ್ದರು. ಪಪೂ ಕಾಲೇಜ ಪ್ರಾಚಾರ್ಯ ಎಸ್.ಎಚ್.ಬೋಳಿಶೆಟ್ಟಿ ಉಪಸ್ಥಿತರಿದ್ದರು.

ಎಂ.ಎಲ್. ತೊನಸಿಹಾಳ ಸ್ವಾಗತಿಸಿ ದರು. ಕೆ.ಬಿ. ನಾಯ್ಕರ ಪರಿಚಯಿಸಿ ದರು. ಶಬಿನಾ ಪಿಂಜಾರ ನಿರೂಪಿಸಿದರು. ಎಂ.ಆರ್. ಕಾಂಬಳೆ ವಂದಿಸಿದರು.`ಏಡ್ಸ್ ಜಾಗೃತಿ ಅಗತ್ಯ~

ಹುನಗುಂದ: ಯುವಕರು ಆಧುನಿಕ ಆಡಂಬರದ ಮೋಹದ ಬದುಕಿನಿಂದ ದೂರವಿರಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯವಂತ ಜೀವನ ಸಾಗಿಸುವತ್ತ ಚಿಂತನೆ ಮಾಡಬೇಕು ಎಂದು  ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಚ್.ಡಿ.ಚೇತನಾ ಹೇಳಿದರು.ಅಮೀನಗಡ ಸಂಗಮೆಶ್ವರ ಪದವಿ ಪೂರ್ವ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಘಟಕ ಹಮ್ಮಿಕೊಂಡ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ಎಸ್.ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕಿ ಶಕುಂತಲಾ ಹಿಪ್ಪರಗಿ ಏಡ್ಸ್ ಪ್ರತಿಬಂಧಕ ಕ್ರಮಗಳ ಬಗ್ಗೆ ತಿಳಿಸಿದರು.ಎಚ್ ಶಿವಪ್ಪ ಸ್ವಾಗತಿಸಿದರು. ಎಸ್.ಎಸ್.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಂ.ಡೊಳ್ಳಿನ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry