ಪರಿಸರ ಸಂರಕ್ಷಿಸುವ ಕ್ರಿಸ್‌ಮಸ್ ಮರ

7

ಪರಿಸರ ಸಂರಕ್ಷಿಸುವ ಕ್ರಿಸ್‌ಮಸ್ ಮರ

Published:
Updated:

ಕ್ರಿಸ್‌ಮಸ್ ಮರಗಳು ಪರಿಸರವನ್ನು ಕುಲುಷಿತಗೊಳಿಸುವ ಮಿಥೇನ್‌ನಂತಹ ವಿಷಾನಿಲವನ್ನು ಹೀರಿಕೊಂಡು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುತ್ತಿವೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.ಈ ಮೊದಲು ಕ್ರಿಸ್‌ಮಸ್ ಮರಗಳು ಮಿಥೇನ್ ಅನಿಲವನ್ನು ಹೊರಸೂಸುತ್ತವೆ ಎಂದು ಶಂಕಿಸಲಾಗಿತ್ತು.ಸ್ವೀಡನ್ನಿನ ಲಂಡ್ ಮತ್ತು ಸ್ಟಾಕ್‌ಹೋಂ ವಿಶ್ವವಿದ್ಯಾಲಯಗಳ ಸಂಶೋಧಕರು ವಿವಿಧ ಸನ್ನಿವೇಶ ಮತ್ತು ತಾಪಮಾನಗಳಲ್ಲಿ ಬೆಳೆದಿರುವ ಮರಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಪೈನ್, ಸ್ಪ್ರೂಸ್, ಭೂರ್ಜ ಮರಗಳು ಮಿಥೇನ್ ಅನಿಲವನ್ನು ಹೀರಿಕೊಳ್ಳುತ್ತವೆ ಎಂಬ ಅಂಶ ಸಂಶೋಧನೆಯಿಂದ ವ್ಯಕ್ತವಾಗಿದೆ ಎಂದು `ಡಿಸ್ಕವರಿ ನ್ಯೂಸ್' ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry