ಪರಿಸರ ಸ್ನೇಹಿ ಆರ್ಥಿಕತೆ ಅಪರಾಧ

7

ಪರಿಸರ ಸ್ನೇಹಿ ಆರ್ಥಿಕತೆ ಅಪರಾಧ

Published:
Updated:
ಪರಿಸರ ಸ್ನೇಹಿ ಆರ್ಥಿಕತೆ ಅಪರಾಧ

ರಯೊ ಡಿ ಜನೈರೊ (ಎಎಫ್‌ಪಿ):  ಪರಿಸರ ಸ್ನೇಹಿ ಆರ್ಥಿಕತೆಯೆಂಬುದು, ಮನುಕುಲದ ವಿರುದ್ಧ ಎಸಗುವ ಅಪರಾಧವಾಗಿದೆ. ಇದು ಭೂಮಿಯನ್ನು ಅಮೆರಿಕದ ವಸಾಹತುವನ್ನಾಗಿವುದಲ್ಲದೆ, ಜಗತ್ತಿನ ಸಮುದಾಯಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂದು ಐದು ರಾಷ್ಟ್ರಗಳ ಮೂಲನಿವಾಸಿಗಳು ದನಿ ಎತ್ತಿದ್ದಾರೆ.ರಯೊ ಡಿ ಜನೈರೊದಲ್ಲಿ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ರಯೊ +20 ಶೃಂಗಸಭೆಗೆ ಪರ್ಯಾಯವಾಗಿ ಮೂಲನಿವಾಸಿಗಳು ನಡೆಸಿದ ಸಭೆಯಲ್ಲಿ ಈ ವಿರೋಧ ದಾಖಲಿಸಲಾಗಿದೆ.`ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬೇಕಾದರೆ,  ಮೂಲನಿವಾಸಿಗಳು ಸಹಸ್ರಾರು ವರ್ಷಗಳಿಂದ ಪಾಲಿಸುತ್ತಾ ಬಂದಿರುವ ಸಂಪನ್ಮೂಲಗಳ ನಿರ್ವಹಣೆಯ ಸಾಂಪ್ರದಾಯಿಕ ಕ್ರಮಗಳನ್ನು ಎಲ್ಲಾ ರಾಷ್ಟ್ರಗಳು ಅನುಸರಿಸಬೇಕು~ ಎಂದು `ಕಾರಿ-ಒಕಾ 2~ ಎಂದು ಕರೆದಿರುವ ಘೋಷಣೆ ಹೇಳಿದೆ.`ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭೂಮಿಯ ಸಮತೋಲನ ನಾಶ ಮಾಡುವುದಕ್ಕೆ, ಋತುಮಾನಗಳನ್ನು ಕೆಡಿಸುವುದಕ್ಕೆ, ಹವಾಮಾನವನ್ನು ಹಾಳು ಮಾಡುವುದಕ್ಕೆ, ಬದುಕನ್ನು ವ್ಯಾಪಾರೀಕರಣಗೊಳಿಸುವುದಕ್ಕೆ ಮತ್ತು  ಮನುಕುಲದ ಅಸ್ವಿತ್ವಕ್ಕೆ ಬೆದರಿಕೆ ಒಡ್ಡುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ~ ಎಂದು ಮೂಲನಿವಾಸಿಗಳು ಹೇಳಿದ್ದಾರೆ.`ರಯೊ +20 ಶೃಂಗ ಸಭೆ ಮತ್ತು ಪರಿಸರ ಸ್ನೇಹಿ ಆರ್ಥಿಕತೆಯ ಧ್ಯೇಯೋದ್ದೇಶಗಳು, ಮೂಲ ನಿವಾಸಿಗಳು ಎದುರಿಸುತ್ತಾ ಬಂದಿರುವ ವಸಾಹತುಶಾಹಿಯ ಮುಂದುವರಿದ ಭಾಗವೇ ಆಗಿದೆ~ ಎಂದು ಆರೋಪಿಸಲಾಗಿದೆ.`ಸ್ವಯಂ ನಿರ್ಣಯದ, ಸ್ವಯಂ ಆಡಳಿತ ನಡೆಸುವ ಮತ್ತು ಅಭಿವೃದ್ಧಿ ಕುರಿತು ಸ್ವತಃ ನಿರ್ಧಾರ ತೆಗೆದುಕೊಳ್ಳುವ ನಮ್ಮ ಹಕ್ಕುಗಳು, ಭೌಗೋಳಿಕ ಪ್ರದೇಶಗಳು ಮತ್ತು ಸಂಪನ್ಮೂಲಗಳ ಮೇಲೆ ನಾವು ಹೊಂದಿರುವ ಹಕ್ಕುಗಳ ಮೇಲೆ ವಿಶ್ವದ ವಿವಿಧ ಸರ್ಕಾರಗಳು ದಾಳಿ ನಡೆಸುತ್ತಿವೆ~ ಎಂದು ಆಪಾದಿಸಿದ್ದಾರೆ.ಈ ಪರ್ಯಾಯ ಶೃಂಗಸಭೆಯಲ್ಲಿ ಜಗತ್ತಿನ 200 ಪರಿಸರವಾದಿ ಗುಂಪುಗಳು ಮತ್ತು ಸಾಮಾಜಿಕ ಚಳವಳಿ ಸಂಸ್ಥೆಗಳು ಭಾಗವಹಿಸಿದ್ದವು.ಬ್ರೆಜಿಲ್‌ನ 20 ಮೂಲ ನಿವಾಸಿಗಳ ಗುಂಪುಗಳ 400 ಪ್ರತಿನಿಧಿಗಳು ಸೇರಿದಂತೆ ಕೆನಡಾ, ಅಮೆರಿಕ, ಕೊಲಂಬಿಯಾ ಮತ್ತು ನಿಕರಾಗುವಾದ 1,200 ಮೂಲ ನಿವಾಸಿಗಳು ಸಭೆಯಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry