ಪರಿಸರ ಸ್ನೇಹಿ ಪ್ರಶಸ್ತಿ

7

ಪರಿಸರ ಸ್ನೇಹಿ ಪ್ರಶಸ್ತಿ

Published:
Updated:
ಪರಿಸರ ಸ್ನೇಹಿ ಪ್ರಶಸ್ತಿ

ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಕೈಗೊಳ್ಳುವ ಸಂಶೋಧನೆಗಳನ್ನು ಪರಿಚಯಿಸಲು ಪ್ರತಿವರ್ಷ `ಜೇಡ್-ಐ (joy of engin­eering design and innovations)ಎಂಬ ಸಂಶೋಧನಾ ವಸ್ತು ಪ್ರದರ್ಶನ ನಡೆಯುತ್ತದೆ. 2012ರ ಜೂನ್‌ನಲ್ಲಿ ನಡೆದ ಪ್ರದರ್ಶನವನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್‌ಸಿ) ಹಾಗೂ ಲಿಂಬರ್ ಲಿಂಕ್ ಟೆಕ್ನಾಲಜಿ ಕಂಪೆನಿ ಪ್ರಾಯೋಜಿಸಿದ್ದವು.ವಿವಿಧ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು 100ಕ್ಕೂ ಹೆಚ್ಚು ಪ್ರಾಜೆಕ್ಟ್ ವರ್ಕ್‌ಗಳನ್ನು ಅಲ್ಲಿ ಅನಾವರಣಗೊಳಿಸಿದ್ದರು. ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ನೀರು ಶುದ್ಧೀಕರಣ ಯಂತ್ರ ತೀರ್ಪುಗಾರರ ಮೆಚ್ಚುಗೆ ಗಳಿಸಿತು. 2012ರ `ಮಹಿಂದ್ರ ರೇವಾ ಗ್ರೀನೆಸ್ಟ್ ಪ್ರೊಜೆಕ್ಟ್' ಎಂಬ ಪ್ರಶಸ್ತಿಯನ್ನೂ ಪಡೆಯಿತು. (ಮಾಹಿತಿಗೆ ಮೊ: 99867 68309)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry