ಮಂಗಳವಾರ, ಏಪ್ರಿಲ್ 20, 2021
32 °C

ಪರಿಸರ ಸ್ವಚ್ಛತೆಯಿಂದ ರೋಗ ತಡೆಗಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ: ನೈಸರ್ಗಿಕ ಮಾಲಿನ್ಯ ದಿಂದಾಗಿ ಇಂದು ಅನೇಕ ರೀತಿಯ ಸಾಂಕ್ರಮಿಕ ರೋಗಗಳು ವ್ಯಾಪಿಸುತ್ತಿವೆ. ನಮ್ಮ ಸುತ್ತಲಿನ ಪರಿಸರವನ್ನು ರಕ್ಷಿಸುವ ಜೊತೆಗೆ ಸ್ವಚ್ಛವಾಗಿ ಇಟ್ಟುಕೊಂಡರೆ ರೋಗಗಳ ಹರಡುವಿಕೆಯನ್ನು ತಡೆಗಟ್ಟ ಬಹುದಾಗಿದೆ ಎಂದು ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ವೈ.ಮಾಳೋದೆ ಹೇಳಿದರು.

ಇಲ್ಲಿಯ ಜ್ಞಾನಭಾರತಿ ಕಾನ್ವೆಂಟ್ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ತ್ಯಾಜ್ಯ ಹಾಗೂ ಮಲೀನ ವಸ್ತುಗಳು ನಮ್ಮ ಕುಡಿಯುವ ನೀರಿನ ಮೂಲವನ್ನು ಸೇರುತ್ತಿವೆ. ಮಲೀನ ನೀರನ್ನು ಸೇವಿ ಸುತ್ತಿರುವುದರಿಂದ ಹಲವಾರು ದೈಹಿಕ ತೊಂದರೆಗಳು ಕಾಣುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು ನಮ್ಮ ಸುತ್ತಲಿನ ಪರಿಸರವನ್ನು ಸ್ವತಃ ನಾವೇ ರಕ್ಷಿಸಿಕೊಳ್ಳುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಮಾಜಿ ಅಧ್ಯಕ್ಷ ಲಕ್ಷ್ಮಣ ಶೇಷಗಿರಿ ಮಾತನಾಡಿ, ನೈಸರ್ಗಿಕ ಸಂಪತ್ತು ಉಳಿಸುವಲ್ಲಿ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಸಹ ವಿಫಲಗೊಳ್ಳುತ್ತಿವೆ. ಸಮುದಾಯದ ಸಹಭಾಗಿತ್ವ ಇದ್ದಾಗ ಮಾತ್ರವೇ ನೈಸರ್ಗಿಕ ಸಂಪತ್ತನ್ನು ಉಳಿಸಬಹುದಾಗಿದೆ ಎಂದು ನುಡಿದ ಅವರು, ಪರಿಸರ ದಿನ ಬರೀ ಆಚರಣೆಗೆ ಸೀಮಿತವಾಗದೇ ಅರ್ಥಪೂರ್ಣ ವಾಗಬೇಕಿದೆ ಎಂದು ಹೇಳಿದರು.

ಪ್ರಬಂಧ ಸ್ಪರ್ಧೆಯಲ್ಲಿ ಸ್ಫೂರ್ತಿ ಬಸಾಪುರ ಪ್ರಥಮ, ಅಂಕಿತಾ ಕೆ.ಎಸ್. ದ್ವಿತೀಯ, ದಿವ್ಯಾ ಕೆರಿಮತ್ತಿಹಳ್ಳಿ ಮತ್ತು ಪ್ರಿಯಾಂಕಾ ಆರೇರ ತೃತೀಯ, ಚಿತ್ರಕಲೆಯಲ್ಲಿ ಸಾಬೀರ ಮುಲ್ಲಾ ಪ್ರಥಮ, ಸುದೀಪ ನೀರಮಣಿಗಾರ ದ್ವಿತೀಯ, ಸಿಂಧೂ ಕೊರಡಿ ತೃತೀಯ ಸ್ಥಾನ ಗಳಿಸಿದರು. 

ಮುಖ್ಯಶಿಕ್ಷಕ ವಿ.ಎಂ. ಕಬ್ಬಿಣಕಂತಿ ಮಠ, ಸಹಶಿಕ್ಷಕ ರಾದ ಜೆ.ಎಂ.ಅಂಗಡಿ, ಜಿ.ಬಿ.ರಾಯಚೂರ, ಎಸ್.ಎಚ್.ಬಿದರ ಕೊಪ್ಪ, ವಾಣಿ ಸುಗಂಧಿ, ದಾಕ್ಷಾಯಿಣಿ ಮಡಿವಾಳರ, ಮಹಾಲಕ್ಷ್ಮಿ ಉಡುಪಿ ಪಾಲ್ಗೊಂಡಿದ್ದರು. ಮಮತಾ ಬಸಾಪೂರ ಪ್ರಾರ್ಥಿಸಿದರು. ಎಂ.ಎನ್. ಹಾವೇರಿ ಸ್ವಾಗತಿಸಿದರು. ಬಸವರಾಜ ನೆಲ್ಲಿಕೊಪ್ಪ ನಿರೂಪಿಸಿದರು. ವಿ.ಎಂ.ತಳವಾರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.