ಗುರುವಾರ , ಅಕ್ಟೋಬರ್ 24, 2019
21 °C

ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರ ಧರಣಿ

Published:
Updated:
ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರ ಧರಣಿ

ಹೊಳೆನರಸೀಪುರ: ಭೂಮಿಗೆ ಪರಿಹಾರ ನೀಡಲು ಆಗ್ರಹಿಸಿ ಹಳೇಕೋಟೆ ಹೋಬಳಿಯ ಸಿಗರನಹಳ್ಳಿ ಗ್ರಾಮದ ಜನತೆ ಮಂಗಳವಾರ ಸುಜಲಾನ್ ವಿಂಡ್ ಫ್ಯಾನ್ ಕಂಪನಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಈಗಾಗಲೇ ಸುತ್ತಲ ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ಫ್ಯಾನ್ ಅಳವಡಿಸಿದ್ದು, ಇನ್ನೊಂದು ತಿಂಗಳಲ್ಲಿ ಇವರು ಜಾಗ ಖಾಲಿ ಮಾಡುವುದು ಖಚಿತ. ಇದರಿಂದ ಸಾಕಷ್ಟು ತೊಂದರೆ ಈಗಾಗಲೇ ಆಗಿದೆ. ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯ್ತಿ ಸದಸ್ಯ ಲೊಕೇಶ್, ಕಂಪನಿಯು ಕೆಲಸ ಆರಂಭಿಸುವಾಗ ಪರಿಹಾರ ನೀಡುವ ಭರವಸೆ ನೀಡಿತ್ತು. ಆದ್ದರಿಂದ ಬೆಟ್ಟದ ಮೇಲೆ ಉಳುಮೆ ಮಾಡುತ್ತಿದ್ದ ದರಕಾಸ್ತು ಜಮೀನು ಮತ್ತು ಗೋಮಾಳ ಜಮೀನು ಬಿಟ್ಟು ಕೊಟ್ಟೆವು. ಆದರೆ, ಈ ಕಂಪನಿಯರು ಇದುವರೆವಿಗೂ ಪರಿಹಾರವನ್ನೇ ನೀಡಿಲ್ಲ. ಅಂದಿನಿಂದ ಇಂದಿನವರೆಗೆ ದಿನ ದೂಡುತ್ತಲೇ ಇದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)