ಶುಕ್ರವಾರ, ಫೆಬ್ರವರಿ 26, 2021
20 °C

ಪರಿಹಾರ ನಿರಾಕರಿಸಿದ ರೋಹಿತ್‌ ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಹಾರ ನಿರಾಕರಿಸಿದ ರೋಹಿತ್‌ ತಾಯಿ

ಹೈದರಾಬಾದ್ (ಪಿಟಿಐ): ಹೈದರಾಬಾದ್‌ ಕೇಂದ್ರೀಯ ವಿ.ವಿ ವತಿಯಿಂದ ₹ 8ಲಕ್ಷ ಪರಿಹಾರ ಸ್ವೀಕರಿಸಲು ಸಂಶೋಧನಾ ವಿದ್ಯಾರ್ಥಿ ವೇಮುಲ ಅವರ ತಾಯಿ ನಿರಾಕರಿಸಿದ್ದಾರೆ.ವಿ.ವಿಗೆ ಶನಿವಾರ ಭೇಟಿ ನೀಡಿದ ವೇಮುಲ ತಾಯಿ ರಾಧಿಕಾ ಹಾಗೂ ಸಹೋದರಿ ನೀಲಿಮಾ ಮತ್ತು ಸಹೋದರ ರಾಜು ಅವರು, ವಿ.ವಿ ಆಡಳಿತ ಮಂಡಳಿ, ಪ್ರಧಾನಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಧೋರಣೆಯನ್ನು ಟೀಕಿಸಿದರು.‘ವಿಶ್ವವಿದ್ಯಾಲಯ ನಮಗೆ ಎಂಟು ಕೋಟಿ ಕೊಟ್ಟರೂ ನಾವು ಸ್ವೀಕರಿಸುವುದಿಲ್ಲ’ ಎಂದು ನೀಲಿಮಾ ತಿಳಿಸಿದರು.‘ನಾನು ದಲಿತೆ’ – ರೋಹಿತ್‌ ತಾಯಿ ಪ್ರತಿಪಾದನೆ: ತಾನು ದಲಿತ ಸಮುದಾಯಕ್ಕೆ ಸೇರಿದವರು ಎಂದು ತಾಯಿ ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.‘ನಾನು ಪರಿಶಿಷ್ಟ ಜಾತಿಯ ಮಾಲಾ ಸಮುದಾಯದಲ್ಲಿ ಜನಿಸಿದ್ದೆ. ಆದರೆ, ವಡ್ಡರ ಸಮುದಾಯಕ್ಕೆ ಸೇರಿದ ಕುಟುಂಬ ನನ್ನನ್ನು ದತ್ತು ತೆಗೆದುಕೊಂಡಿತ್ತು’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.ವಿದ್ಯಾರ್ಥಿಗಳು ಅಸ್ವಸ್ಥ: ವಿ.ವಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯೂ ಮುಂದುವರಿದಿದೆ. ಆರೋಗ್ಯ ಹದಗೆಟ್ಟಿದ್ದರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಏಳು ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.