ಪರಿಹಾರ ವಿಳಂಬ: ಎಚ್‌ಡಿಕೆ ತರಾಟೆ

7

ಪರಿಹಾರ ವಿಳಂಬ: ಎಚ್‌ಡಿಕೆ ತರಾಟೆ

Published:
Updated:

ಶಿವಮೊಗ್ಗ: `ಅತಿವೃಷ್ಟಿಯಿಂದಾಗಿ ರಾಜ್ಯದ 8 ಜಿಲ್ಲೆಗಳಲ್ಲಿ  ್ಙ 3,200 ಕೋಟಿಗೂ ಹೆಚ್ಚು ಹಾನಿಯಾಗಿದೆ. ಆದರೆ, ಸರ್ಕಾರ ಇದುವರೆಗೂ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ವರದಿ ಕಳುಹಿಸಿಲ್ಲ; ರಾಜ್ಯದಿಂದಲೂ ಸಾಕಷ್ಟು ಪರಿಹಾರ ಬಿಡುಗಡೆ ಮಾಡದೇ ನಿರ್ಲಕ್ಷ್ಯ ಮಾಡಲಾಗಿದೆ' ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.`ಹಾನಿಯಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಇದುವರೆಗೂ ಭೇಟಿ ನೀಡಿಲ್ಲ. ಕೊನೆ ಪಕ್ಷ ಒಬ್ಬ ಮಂತ್ರಿಯೂ ಪರಿಶೀಲನೆ ನಡೆಸಿಲ್ಲ. ಸಂತ್ರಸ್ತ ರೈತರಿಗೆ ನೆರವಿಗೆ ಧಾವಿಸಿಲ್ಲ' ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.ಮುಂದಿನ ಎರಡು ವಾರಗಳಲ್ಲಿ ರಾಜ್ಯ ಸರ್ಕಾರ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಈ ಕುರಿತಂತೆ ಸರ್ಕಾರಕ್ಕೆ 2 ವಾರಗಳ ಗಡುವು ನೀಡಲಾಗುವುದು. ಅಷ್ಟರೊಳಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದರು.ಕೊಳೆ ರೋಗದಿಂದ 2.20ಲಕ್ಷ ಎಕರೆ ಅಡಿಕೆ ತೋಟ ಹಾಳಾಗಿದೆ. ರೂ 800 ಕೋಟಿ ಮೌಲ್ಯದ ಅಡಿಕೆ ಬೆಳೆ ನಷ್ಟವಾಗಿದೆ. ಇದರಿಂದ 1,67,420 ಕುಟುಂಬಗಳಿಗೆ ಜೀವನಕ್ಕೆ ತೊಂದರೆಯಾಗಿದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry