ಗುರುವಾರ , ಏಪ್ರಿಲ್ 15, 2021
24 °C

ಪರಿಹಾರ ವಿಳಂಬ: ರೈತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ರೈತರ ಭೂ ಸ್ವಾಧೀನ ಪಡಿಸಿಕೊಂಡು ಮೂರು ವರ್ಷ ಕಳೆದರೂ ಕೆಐಡಿಬಿ ಪರಿಹಾರ ನೀಡಿಲ್ಲವೆಂದು ಆರೋಪಿಸಿ ಭೂ ಸ್ವಾಧೀನ ಹೋರಾಟ ಸಮಿತಿ ಕಾರ್ಯಕರ್ತರು ಮಿನಿವಿಧಾನ ಸೌಧ ಎದುರು ಈಚೆಗೆ ಪ್ರತಿಭಟನೆ ನಡೆಸಿದರು.ಕೈಗಾರಿಕಾ ವಸಾಹತು ಸ್ಥಾಪಿಸಲು ಹಾಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಕೈಗಾರಿಕಾ ಅಭಿವೃದ್ಧಿ ಮಂಡಳಿಯು ಮೂರು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ 4ಲ್ಲಿರುವ ದೇವರಾಯಸಮುದ್ರಂ ಮತ್ತು ಹನುಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಮೀನುಗಳ ಸ್ವಾಧೀನಕ್ಕೆ ಮೊದಲ ಅಧಿಸೂಚನೆ ಹೊರಡಿಸಿದೆ. ಇಲ್ಲಿಯವರೆಗೂ ಯಾವುದೇ ಪರಿಹಾರ ನೀಡಿಲ್ಲ, ಹಾಗಾಗೀ ಕೂಡಲೇ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.ವಿಶೇಷ ತಹಶೀಲ್ದಾರ್ ಬಿ.ವಿ.ರಾಮಮೂರ್ತಿರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಹೋರಾಟ ಸಮಿತಿಯ ಸಂಚಾಲಕ ಡಿ.ವಿ.ಶ್ರೀನಿವಾಸಮೂರ್ತಿ, ಕಾಂಗ್ರೆಸ್ ಮುಖಂಡ ಉತ್ತನೂರು ಶ್ರೀನಿವಾಸ್, ತಾಲ್ಲೂಕು ಸಂಚಾಲಕ ಮಂಜುನಾಥ್, ಸಂಘಟನಾ ಸಂಚಾಲಕ ಮೆಕಾನಿಕ್ ಶ್ರೀನಿವಾಸ್, ಎ.ರಾಮಪ್ಪ, ಸೋಮಶೇಖರ್, ಕಾರ್ಯದರ್ಶಿ ಎ.ವಿ.ವೆಂಕಟೇಶನ್, ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಜಿಲ್ಲಾ ಸಂಚಾಲಕ ಬೈಚೇಗೌಡ, ನಾಗರಾಜ್, ದಸಸಂ ಸಂಚಾಲಕ ಕೀಲುಹೊಳಲಿ ಸತೀಶ್, ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಮರಕಲಗಟ್ಟ ಚನ್ನಕೇಶವಗೌಡ, ಬಾಲು, ರಾಮಮೂರ್ತಿ, ಶಿವರಾಜ್, ಚಲಪತಿ, ಗೋವಿಂದಪ್ಪ, ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.ಅರ್ಜಿ ಆಹ್ವಾನ

ಕೋಲಾರ: ತಾಲ್ಲೂಕಿನಲ್ಲಿ ಆರಂಭವಾಗುವ ಸ್ನಾತಕೋತ್ತರ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ನೀಡಲಾಗುವುದು. ನಿಲಯ ಪಾಲಕರು ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ವಿಸ್ತರಣಾಧಿಕಾರಿಗಳ ಕಚೇರಿಯಿಂದ ಅರ್ಜಿ ಪಡೆದು, ಜುಲೈ 21ರ ಒಳಗೆ ಸಲ್ಲಿಸಬೇಕು. ಉಚಿತ ಊಟ, ವಸತಿ, ದಿನಪತ್ರಿಕೆ, ಕಂಪ್ಯೂಟರ್ ಸೌಲಭ್ಯ ನೀಡಲಾಗುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.