ಪರೀಕ್ಷಾ ಅಕ್ರಮ: ಸಂಸ್ಥೆಗಳ ಮಾನ್ಯತೆ ರದ್ದು- ರಾಮದಾಸ್

7

ಪರೀಕ್ಷಾ ಅಕ್ರಮ: ಸಂಸ್ಥೆಗಳ ಮಾನ್ಯತೆ ರದ್ದು- ರಾಮದಾಸ್

Published:
Updated:

ಮೈಸೂರು:  ರಾಜ್ಯದ ವಿವಿಧೆಡೆ ನರ್ಸಿಂಗ್ ಕಾಲೇಜುಗಳಲ್ಲಿ ವಾಮಮಾರ್ಗ ಅನುಸರಿಸಿ ಪರೀಕ್ಷೆ ಬರೆಯುತ್ತಿರುವುದರ ಹಿಂದೆ ವ್ಯವಸ್ಥಿತವಾದ ದೊಡ್ಡ ಜಾಲವಿದ್ದು, ಇದನ್ನು ಮಟ್ಟ ಹಾಕುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಹೇಳಿದರು.ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ 2005ರ ಸಾಲಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭಕ್ಕೂ ಮುನ್ನ ಅವರು ಪತ್ರರ್ತರಿಗೆ ಈ ವಿಷಯ ತಿಳಿಸಿದರು.ಹಲವು ಕಾಲೇಜುಗಳಲ್ಲಿ ಪರೀಕ್ಷೆಯಲ್ಲಿ ಅಕ್ರಮ, ಬೇಕಾಬಿಟ್ಟಿಯಾಗಿ ಪ್ರವೇಶ ನೀಡುವುದು ಮಾಮೂಲಿಯಾಗಿದೆ. ಇವು ರಾಜ್ಯ ಮತ್ತು ದೇಶಕ್ಕೆ ಅನಿಷ್ಠ ಪದ್ಧತಿ. ಇದರ ಹಿಂದೆ ದೊಡ್ಡ ಜಾಲವೇ ಇದ್ದು, ಈ ಅಕ್ರಮಗಳ ಬಗ್ಗೆ ಯಾವುದೇ ವಿನಾಯ್ತಿ ನೀಡುವುದಿಲ್ಲ. ಅಕ್ರಮ ಪತ್ತೆ ಹಚ್ಚುವ ಕಾರ್ಯ ನಿಲ್ಲಿಸುವುದಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry