ಬುಧವಾರ, ಜೂಲೈ 8, 2020
21 °C

ಪರೀಕ್ಷಾ ಬದಲಾವಣೆ ಸ್ವಾಗತಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಪಿ.ಎಸ್.ಸಿ. ಯು ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಸ್ಪರ್ಧಾತ್ಮಕ (ಕೆ.ಎ.ಎಸ್) ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಸ್ವಾಗತಾರ್ಹ.ಇದರಿಂದಾಗಿ ಕೆಲವು  ಐಚ್ಛಿಕ ವಿಷಯಗಳಲ್ಲಿನ ಪ್ರಶ್ನೆಪತ್ರಿಕೆಗಳಲ್ಲಿನ ಸರಳತೆ ಮತ್ತು ಮೌಲ್ಯಮಾಪನ ನೂನ್ಯತೆಗಳನ್ನು ಸರಿಪಡಿಸಿದಂತಾಗಿದೆ.ಈ ಸಂಬಂಧ ಕೆ.ಪಿ.ಎಸ್.ಸಿಯು ವಿವಿಧ ರಾಜ್ಯಗಳ ಪರೀಕ್ಷಾ ಪದ್ಧತಿಯನ್ನು ಅಧ್ಯಯನ ಮಾಡಿ, ಹೊಸ ಪದ್ಧತಿ ಅಳವಡಿಕೆಗೆ ಪ್ರಸ್ತಾವ ಸಲ್ಲಿಸಿರುವುದು ಅಭಿನಂದನಿಯ.ಆದರೆ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಚಾರಕ್ಕೆ ಪೂರಕವಾಗಿರುವ ಸಂದರ್ಶನ ರದ್ದುಪಡಿಸಲು ಪ್ರಸ್ತಾವನೆ ಸಲ್ಲಿಸದಿರುವುದು, ಸರ್ಕಾರಿ ಸೇವೆಗೆ ಸೇರಬಯಸಿರುವ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಭಾರಿ ಹಿನ್ನಡೆಯುಂಟಾಗಿದೆ.ಸಂದರ್ಶನವು ಅಧುನಿಕ ಪರೀಕ್ಷೆ ಪದ್ಧತಿಯಲ್ಲಿ ಒಂದು ವ್ಯಕ್ತಿತ್ವ ಪರೀಕ್ಷೆಯಾಗಿ ಉಳಿದಿಲ್ಲ.ಬದಲಾಗಿ ರಾಜಕೀಯ ಭ್ರಷ್ಟಚಾರ, ಸ್ವಜನ ಪಕ್ಷಪಾತಕ್ಕೆ  ಕಾರಣವಾಗಿದೆ. ಆದುದರಿಂದ ಸದರಿ ಪರೀಕ್ಷಾ ಪದ್ಧತಿ ಬದಲಾವಣೆಯಲ್ಲಿ ವ್ಯಕ್ತಿತ್ವ ಪರೀಕ್ಷೆಯನ್ನು ಕೈಬಿಟ್ಟು, ಪ್ರಾಮಾಣಿಕ ಅಭ್ಯರ್ಥಿಗಳು ಸಾರ್ವಜನಿಕ ಸೇವೆಗೆ ಆಯ್ಕೆಯಾಗಲು ಅನುಕೂಲ ಮಾಡಿಕೊಡಬೇಕೆಂದು ಸಂಬಂಧಪಟ್ಟವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.