ಬುಧವಾರ, ಜೂನ್ 16, 2021
21 °C

ಪರೀಕ್ಷಾ ಶುಲ್ಕ ವಿನಾಯಿತಿ ರದ್ದು: ಪ್ರತಿಭಟನೆ

ಪರೀಕ್ಷಾ ಶುಲ್ಕ ವಿನಾಯಿತಿ ಕಡಿತ­ಗೊಳಿಸಿರುವುದನ್ನು ಖಂಡಿಸಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿ­ಗಳು ವಿಶ್ವವಿದ್ಯಾಲಯ ಮುಂದೆ ಪ್ರತಿಭಟನೆ ನಡೆಸಿದರು. Updated:

ಅಕ್ಷರ ಗಾತ್ರ : | |

ತುಮಕೂರು: ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ವಿನಾಯಿತಿ ಕಡಿತಗೊಳಿ ಸಿರುವು ದನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈ­ಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಶನಿವಾರ ವಿ.ವಿ ಎದುರು ಪ್ರತಿಭಟನೆ ನಡೆಸಿದರು.ವಿಶ್ವವಿದ್ಯಾಲಯದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾ­ಕಾರ­ರಿಂದ ಮನವಿ ಸ್ವೀಕರಿಸಿ ಮಾತ ನಾಡಿದ ವಿ.ವಿ ಕುಲಪತಿ ಪ್ರೊ.ಎ.ಎಚ್‌.­ರಾಜಾಸಾಬ್‌, ಬುಧವಾರದೊಳಗೆ ಸಕಾರಾತ್ಮಕ ಉತ್ತರ ನೀಡಲಾ­ಗುವುದು. ರಾಜ್ಯದ ಇತರೆ ವಿ.ವಿ.ಗಳಲ್ಲಿ ಇರುವ ಶುಲ್ಕ ವಿನಾಯಿತಿ ನೀತಿಯನ್ನು ಅಧ್ಯಯನ ಮಾಡಿ ನಿರ್ಧಾರ ತೆಗೆದು­ಕೊಳ್ಳಲಾಗುವುದು.ಅಲ್ಲಿಯ­ವರೆಗೂ ಶುಲ್ಕ ಕಟ್ಟುವ ಕೊನೆ ದಿನಾಂಕವನ್ನು ಮುಂದೂಡಲಾಗುವುದು ಎಂದರು.ಈವರೆಗೆ ₨ 250 ಪರೀಕ್ಷಾ ಶುಲ್ಕ ಕಟ್ಟುತ್ತಿದ್ದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು, ಪ್ರಸ್ತತ ₨ 1300 ಶುಲ್ಕ ಪಾವತಿಸಬೇಕಾಗಿದೆ. ಜತೆಗೆ ಹಿಂದಿನ ವರ್ಷದ ಬಾಕಿ ಶುಲ್ಕವನ್ನೂ ಕಟ್ಟ­ಬೇಕಾಗಿದೆ. ಗ್ರಾಮೀಣ ಪ್ರದೇಶ, ಬಡವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಳದಿಂದ ವ್ಯಾಸಂಗ ಮುಂದು ವರಿಸುವುದೇ ಕಷ್ಟಕರ ವಾಗಿದೆ ಎಂದು ವಿದ್ಯಾರ್ಥಿ ಮುಖಂಡರು ಹೇಳಿದರು.ಪೂರ್ಣ ಶುಲ್ಕವನ್ನು ಕಟ್ಟಬೇಕು ಎನ್ನುವುದರ ಜತೆಗೆ ಈ ಹಿಂದಿನ ಸೆಮಿಸ್ಟರ್‌ಗಳಲ್ಲಿ ನೀಡಿದ ಶುಲ್ಕ ವಿನಾಯಿತಿಯ ಮೊತ್ತವನ್ನೂ ಈಗ ಕಟ್ಟಬೇಕು ಎಂಬ ವಿ.ವಿ ಆದೇಶ ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ ಎಂದು ಎಐಡಿಎಸ್‌ಒ ರಾಜ್ಯ ಕಾರ್ಯಾಲಯ ಸದಸ್ಯ ಬಿ.ಬಿ.­ರವಿ ನಂದನ್ ಖಂಡಿಸಿ­ದರು. ಮೈಸೂರು, ಬೆಂಗಳೂರು, ಧಾರವಾಡ ವಿಶ್ವವಿದ್ಯಾ ಲಯಗಳಲ್ಲೂ ಇದೇ ನೀತಿಯನ್ನು ಪಾಲಿಸಿದಾಗ, ಎಐಡಿಎಸ್‌ಒ ನೇತೃತ್ವ ದಲ್ಲಿ ನಡೆದ ಹೋರಾಟದ ಫಲವಾಗಿ ಪೂರ್ಣ ಶುಲ್ಕ ಕಟ್ಟಿಸಿಕೊಳ್ಳುವುದನ್ನು ನಿಲ್ಲಿಸಲಾಯಿತು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.