ಪರೀಕ್ಷೆಯಲ್ಲಿ ನಕಲು ಮಾಡಿ, ಮೂರನೇಯ ಮಹಡಿಯಿಂದ ನೆಗೆದಳು!

7

ಪರೀಕ್ಷೆಯಲ್ಲಿ ನಕಲು ಮಾಡಿ, ಮೂರನೇಯ ಮಹಡಿಯಿಂದ ನೆಗೆದಳು!

Published:
Updated:

ಬೆಂಗಳೂರು (ಪಿಟಿಐ): ತರಗತಿಯ ಪರೀಕ್ಷೆಯಲ್ಲಿ ನಕಲು ಮಾಡುವ ವೇಳೆ ಮೇಲ್ವಿಚಾರಕರ ಕೈಗೆ ಸಿಕ್ಕಿ ಬಿದ್ದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ನಡೆಯುತ್ತಿದ್ದ ಮೂರನೇಯ ಮಹಡಿಯಿಂದ ನೆಗೆದ ಘಟನೆ ನಗರದ ಸೆಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾಲೇಜಿನ ಕಟ್ಟಡದಿಂದ ನೆಗೆದ ವಿದ್ಯಾರ್ಥಿನಿಯು ದ್ವೀತಿಯ ಪಿಯುಸಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತರಗತಿಯ ಪರೀಕ್ಷೆಯಲ್ಲಿ ನಕಲು ಮಾಡುವ ವೇಳೆ ಈಕೆ ಮೇಲ್ವಿಚಾರಕ ಕೈಗೆ ಸಿಕ್ಕಿ ಬಿದ್ದಿದ್ದಳು. ಈ ವೇಳೆ ಅವಳ ಉತ್ತರ ಪತ್ರಿಕೆಯನ್ನು ಕಸಿದುಕೊಂಡ ಮೇಲ್ವಿಚಾರಕರು ಆಕೆಗೆ ತರಗತಿಯಿಂದ ಹೊರ ನಡೆಯುವಂತೆ ಹೇಳಿದಾಗ ವಿದ್ಯಾರ್ಥಿನಿಯು ನೇರವಾಗಿ ಕಿಟಕಿಯಿಂದ ಕೆಳಕ್ಕೆ ಹಾರಿದ್ದಾಳೆ ಎಂದು ಪೊಲೀಸರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry