ಪರೀಕ್ಷೆಯಲ್ಲಿ ನಕಲು: 133 ಡಿಬಾರ್

7

ಪರೀಕ್ಷೆಯಲ್ಲಿ ನಕಲು: 133 ಡಿಬಾರ್

Published:
Updated:

ಬೆಂಗಳೂರು: ಪದವಿ ಪರೀಕ್ಷೆ ವೇಳೆ (ಅಕ್ಟೋಬರ್ 12ರಿಂದ 20ರವರೆಗೆ) ನಕಲಿನಲ್ಲಿ ತೊಡಗಿದ್ದ 133 ವಿದ್ಯಾರ್ಥಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿಚಕ್ಷಣಾ ದಳ ಡಿಬಾರ್ ಮಾಡಿದೆ.ಅದರಲ್ಲಿ ಇಬ್ಬರು ವಿದ್ಯಾರ್ಥಿಗಳು ಇಂಟರ್ನೆಟ್ ಸಂಪರ್ಕ ಹೊಂದಿದ ಮೊಬೈಲ್ ಫೋನ್‌ಗಳ ಮೂಲಕ ನಕಲು ಮಾಡುತ್ತಿದ್ದರು. ಪರೀಕ್ಷೆ ನಡೆಯುವ ಕೊಠಡಿಗಳಲ್ಲಿ ಮೊಬೈಲ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರಲು ನಿರ್ಬಂಧ ಇದೆ. ಆ ಬಗ್ಗೆ ವಿದ್ಯಾರ್ಥಿಗಳಿಗೆ ವಿತರಿಸಲಾದ ಪ್ರವೇಶ ಪತ್ರದಲ್ಲಿಯೂ ಮುದ್ರಿಸಲಾಗಿದೆ ಂದು ಮೌಲ್ಯಮಾಪನ ಕುಲಸಚಿವರು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry