ಶನಿವಾರ, ಮೇ 8, 2021
27 °C

ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಾವಣಗೆರೆ ಆರ್.ಎಲ್. ಕಾನೂನು ಕಾಲೇಜಿನ ಕೊನೆಯ ಸಾಲಿನ ವರ್ಷದ ವಿದಾರ್ಥಿಗಳಿಗೆ ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ ನೀಡಲು ಮಂಗಳವಾರ ನಡೆದ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ತು ಸಭೆ ತೀರ್ಮಾನಿಸಿತು.  ಕುವೆಂಪು ವಿವಿಯ ಪ್ರೊ.ಹಿರೇಮಠ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕುಲಪತಿ ಪ್ರೊ.ಎಸ್.ಎ. ಬಾರಿ ಮಾತನಾಡಿ, ಆಂತರಿಕ ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ತಮಗೆ ಮತ್ತೊಮ್ಮೆ ಆಂತರಿಕ ಅಂಕಗಳನ್ನು ಸುಧಾರಿಸಿಕೊಳ್ಳಲು ಪರೀಕ್ಷೆಗೆ ಅನುಮತಿ ನೀಡಬೇಕೆಂಬ ಮನವಿಯನ್ನು ಪರಿಶೀಲಿಸಿ, ಈ ಕುರಿತು ಚರ್ಚೆ ನಡೆದ ಬಳಿಕ ಆಂತರಿಕ ಮೌಲ್ಯಮಾಪನಕ್ಕೆ ಅನುಮತಿ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.ಪ್ರಸ್ತುತ ವರ್ಷದ ಸ್ನಾತಕೋತ್ತರ ಪದವಿಯ ಪ್ರವೇಶಾತಿ ಆಗಸ್ಟ್ ಅಂತ್ಯಕ್ಕೆ ಮುಗಿದಿದ್ದು, ಈ ಬಾರಿ ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಶುಲ್ಕ ರಿಯಾಯ್ತಿ ನೀಡಲಾಗಿದೆ ಎಂದ ಅವರು, 2012-13ನೇ ವರ್ಷದಲ್ಲಿ ನೂತನವಾಗಿ 5 ಸ್ನಾತಕೋತ್ತರ ವಿಭಾಗಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.ಕುವೆಂಪು ವಿವಿಯಲ್ಲಿ ಮೊದಲ ಬಾರಿಗೆ ಶೈಕ್ಷಣಿಕ ವರ್ಷದಿಂದ 5 ಕಾಲೇಜುಗಳಿಗೆ ಸ್ನಾತಕೋತ್ತರ ಪದವಿ ನಡೆಸಲು ಅನುಮತಿ ನೀಡಿದ್ದು, 5 ಸರ್ಕಾರಿ ಕಾಲೇಜುಗಳಲ್ಲಿ ಹಾಗೂ 1 ಅನುದಾನಿತ ಕಾಲೇಜಿಗೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.ಕುವೆಂಪು ವಿವಿಗಳಲ್ಲಿ ಪಿಎಚ್.ಡಿ., ಮಾಡುತ್ತಿರುವ ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಎಚ್.ಡಿ., ವ್ಯಾಸಂಗದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡುವ ಮೂಲಕ ಈಗಿರುವ ಷರತ್ತುಗಳನ್ನು ಸಡಿಲಿಸಬೇಕು ಎಂಬ ಸದಸ್ಯರ ಚರ್ಚೆಗೆ ಉತ್ತರಿಸಿದ ಕುಲಪತಿ ಅವರು, ಸಂಶೋಧನಾ ಶಿಕ್ಷಕರು 6 ತಿಂಗಳ ಕಾಲ ರಜೆ ಪಡೆದು ಸಂಶೋಧನೆ ಕೈಗೊಳ್ಳುವುದರಿಂದ ಹೆಚ್ಚು ಅನನುಕೂಲವಾಗಿದ್ದು, ರಜಾ ದಿನಗಳಲ್ಲಿ ಮಾತ್ರವೇ ಅವರಿಗೆ ಸಂಶೋಧನೆ ನಡೆಸಲು ಅನುವು ಮಾಡಿಕೊಡಬೇಕು ಎಂದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಕುವೆಂಪು ವಿವಿಯ ಸಂಶೋಧನ ಕೇಂದ್ರ ಸ್ಥಾಪನೆಗೆ ್ಙ 5 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದರು.ಪ್ರತಿ ಬಾರಿ ಕನಿಷ್ಠ 1ಲಕ್ಷಕ್ಕೂ ಹೆಚ್ಚಿನ ಗುತ್ತಿಗೆ ಕಾರ್ಯಗಳಿಗೆ ಕುವೆಂಪು ವಿಶ್ವವಿದ್ಯಾಲಯವು `ಇ- ಟೆಂಡರ್~ ಕರೆಯುತ್ತದೆ. ಈಗಾಗಲೇ 2 ಬಾರಿ `ಇ -ಟೆಂಡರ್~ ಮೂಲಕ ಅಹ್ವಾನಿಸಲಾಗಿದೆ. ಈ ರೀತಿಯ ಯೋಜನೆ ಕುವೆಂಪು ವಿವಿಯಲ್ಲಿ ಮೊದಲ ಬಾರಿಗೆ ಆರಂಭಿಸಿದೆ. ಸಲ್ಲಿಸಿದ ಕಾರ್ಯಸೂಚಿಯನ್ನು ಸೆ. 30ರಂದು ವಾರ್ಷಿಕ ವರದಿಯನ್ನು ಕಳುಹಿಸಲಾಗುವುದು. ಹಾಗಾಗಿ, ವರದಿಯಲ್ಲಿ ಏನಾದರೂ ತಪ್ಪುಗಳಿದ್ದರೆ ಸೆ. 27ರ ಒಳಗೆ ತಮ್ಮ ಅಹವಾಲುಗಳನ್ನು ಕುಲಸಚಿವರ ವಿಳಾಸಕ್ಕೆ ಸಲ್ಲಿಸಬಹುದು ಎಂದರು. ಸಭೆಯಲ್ಲಿ ಕುಲಸಚಿವ (ಆಡಳಿತ) ಪ್ರೊ.ಟಿ.ಆರ್. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.