ಬುಧವಾರ, ಜೂನ್ 16, 2021
23 °C

ಪರೀಕ್ಷೆ ಭಯ: ಹೀಗೊಂದು ಪ್ರಯೋಗ...!

ಪ್ರಜಾವಾಣಿ ವಾರ್ತೆ/ನಾಗರಾಜ ಹಣಗಿ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಪರೀಕ್ಷೆ ಎಂದಾಕ್ಷಣ ಮಕ್ಕಳು ಭಯ ಪಡುತ್ತಾರೆ. ಒಂದು ವರ್ಷ ಕಲಿತದ್ದನ್ನು ಕೇವಲ ಮೂರು ತಾಸಿನಲ್ಲಿ ಭಟ್ಟಿ ಇಳಿಸುವುದು ಹೇಗೆ? ಎಂಬ ಚಿಂತೆ ಅವರನ್ನು ಕಾಡುತ್ತದೆ.    ಚೆನ್ನಾಗಿ ಓದಿದವರು ಅಂಜಿಕೆ ಇಲ್ಲದೆ ಪೇಪರ್ ಬರೆಯುತ್ತಾರೆ. ಆದರೆ ಓದದೆ ಇದ್ದವರು ನಕಲು ಮಾಡಲು ಹೋಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ.   ಆದರೆ, ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಪ್ರಾಮಾಣಿಕತೆ ಬೆಳೆಸಿದರೆ ಅವರು ಪರೀಕ್ಷೆಯಲ್ಲಿ ನಕಲು ಮಾಡುವ ಗೋಜಗೆ ಹೋಗುವುದಿಲ್ಲ. ಇಂಥ ಒಂದು ವಿಶಿಷ್ಠ ಪ್ರಯೋಗ ಪಟ್ಟಣದ ಚಂದನ ಶಾಲೆಯಲ್ಲಿ ನಡೆದಿರುವುದು ನಿಜಕ್ಕೂ ಶ್ಲಾಘನೀಯ.ಪರೀಕ್ಷೆ ನಡೆದ ವೇಳೆಯಲ್ಲಿ ಈ ಶಾಲೆಯಲ್ಲಿ ಮೇಲ್ವಿಚಾರಕರು ಯಾವುದೇ ಕೊಠಡಿಗೆ ಹೋಗುವುದಿಲ್ಲ. ಕೇವಲ ಪ್ರಶ್ನೆ ಪತ್ರಿಕೆ ನೀಡಿ ಸಹಿ ಮಾಡಿದ ನಂತರ ಪೇಪರ್ ವೇಳೆ ಮುಗಿ ಯುವವರೆಗೂ ಮೇಲ್ವಿಚಾರಕರು ಕೊಠಡಿಗೆ ಹೋಗುವುದಿಲ್ಲ.ಮೊನ್ನೆ ನಡೆದ ಪರೀಕ್ಷೆ ಸಮಯ ದಲ್ಲಿ ಮಾಧ್ಯಮದವರು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ದೃಶ್ಯ ಕಂಡು ಬಂದಿತು. ಮೇಲ್ವಿ ಚಾರಕರು ಇಲ್ಲ ಅಂದರೂ ಯಾವೊಬ್ಬ ವಿದ್ಯಾರ್ಥಿ ಯೂ ಅತ್ತಿತ್ತ ನೋಡದೆ ಪರೀಕ್ಷೆ ಬರೆಯುವುದರಲ್ಲಿ ಮಗ್ನರಾಗಿದ್ದರು. `ಮೇಲ್ವಿಚಾರಕರು ಕೇವಲ ಪ್ರಶ್ನೆ ಪತ್ರಿಕೆ ಕೊಟ್ಟು ಸಹಿ ಮಾಡಿ ಬರುತ್ತಾರೆ. ನಂತರ ಮಕ್ಕಳು ಅತ್ತಿತ್ತ ನೋಡದೆ ತಮ್ಮಷ್ಟಕ್ಕೆ ತಾವೇ ಪೇಪರ್ ಬರೆಯುತ್ತಾರೆ. ಮಕ್ಕಳು ಶಾಂತ ಮನಸ್ಸಿನಿಂದ ಪರೀಕ್ಷೆ ಬರೆಯುತ್ತಿ ರುವಾಗ ಮೇಲ್ವಿಚಾರಕರು ಕೊಠಡಿ ಯಲ್ಲಿ ತಿರುಗಾಡಿದರೆ ಅವರ ಶಾಂತಿಗೆ ಭಂಗವಾಗುತ್ತದೆ.ಪ್ರಾಮಾಣಿಕತೆಯನ್ನೇ ಮೈಗೂಡಿಸಿ ಕೊಂಡಿರುವ ಇಲ್ಲಿನ ಮಕ್ಕಳು ಪರೀಕ್ಷೆ ಬರೆಯುವಾಗ ಅತ್ತಿತ್ತ ನೋಡು ವುದಿಲ್ಲ. ವರ್ಷ ಪೂರ್ತಿ ಅಭ್ಯಾಸ ಮಾಡಿರುವುದರಿಂದ ಅವರು ಬರೆಯು ವುದರಲ್ಲಿ ತಲ್ಲೆನ ರಾಗಿರುತ್ತಾರೆ~ ಎಂದು ಪ್ರಾಚಾರ್ಯ ಚಂದ್ರಹಾಸ ಪಟಗಾರ ಖುಷಿಯಿಂದ ಹೇಳುತ್ತಾರೆ.`ಮಾರ್ಚ್ 14ರಂದು ಪರೀಕ್ಷೆ ನಡೆದ ಸಂದರ್ಭದಲ್ಲಿ ಜಿಲ್ಲಾ ಉಪ ನಿರ್ದೇಶಕರು ತಮ್ಮ ಸಿಬ್ಬಂದಿಯೊಂದಿಗೆ ಪರೀಕ್ಷಾ ಕೊಠಡಿಗೆ ಭೇಟಿ ನೀಡಿದಾಗ ಯಾವೊಬ್ಬ ಮೇಲ್ವಿಚಾರಕರು ಇಲ್ಲದ್ದನ್ನು ಕಂಡು ದಂಗಾದರು~ ಎಂದು ಹೇಳುವುದನ್ನು ಮರೆಯುವುದಿಲ್ಲ.ಮಕ್ಕಳಲ್ಲಿ ಪರೀಕ್ಷೆ ಬಗ್ಗೆ ಇರುವ ಭಯವನ್ನು ಹೋಗಲಾಡಿಸಬೇಕಾದರೆ ಅವರಲ್ಲಿ ಆತ್ಮವಿಶ್ವಾಸ, ಪ್ರಾಮಾಣಿಕತೆ ಬೆಳೆಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಚಂದನ ಶಾಲೆ ಇತರೇ ಶಾಲೆಗಳಿಗೆ ಮಾದರೀಯ ಸ್ಥಾನದಲ್ಲಿ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.