ಭಾನುವಾರ, ಮೇ 16, 2021
29 °C

ಪರೀಕ್ಷೆ ಮುಂದೂಡಿಕೆಗೆ ಆಗ್ರಹಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರೀಕ್ಷೆ ಮುಂದೂಡಿಕೆಗೆ ಆಗ್ರಹಿಸಿ ಧರಣಿ

ಚಿಂತಾಮಣಿ: ಬೆಂಗಳೂರು ವಿವಿಯು ಪದವಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಪರೀಕ್ಷಾ ವೇಳಾಪಟ್ಟಿ ಅವೈಜ್ಞಾನಿಕವಾ ಗಿದೆ ಎಂದು ಆರೋಪಿಸಿ, ಪರೀಕ್ಷೆಗಳನ್ನು ನವೆಂಬರ್‌ಗೆ ಮುಂದೂಡಬೇಕೆಂದು ಒತ್ತಾಯಿಸಿ ಎಸ್‌ಎಫ್‌ಐ ಕಾರ್ಯ ಕರ್ತರು ಗುರುವಾರವೂ ಪ್ರತಿಭಟನೆ ಮುಂದುವರೆಸಿದರು.ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ನೂರಾರು ವಿದ್ಯಾರ್ಥಿನಿ ಯರು ಗುರುವಾರ ತರಗತಿಗಳನ್ನು ಬಹಿಷ್ಕರಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟಿಸಿದರು.ಬೆಂಗಳೂರು ವಿಶ್ವವಿದ್ಯಾಲಯ ಅವೈಜ್ಞಾನಿಕ ರೀತಿಯಲ್ಲಿ ಪದವಿ ಪರೀಕ್ಷೆಗಳ ವೇಳಾಪಟ್ಟಿ ತಯಾರಿಸಿದೆ. ಒಂದೆಡೆ ಇನ್ನೂ ಪದವಿ ಪಡೆಯಲು ವಿದ್ಯಾರ್ಥಿಗಳಿಗೆ ಪ್ರವೇಶವಕಾಶ ಕಲ್ಪಿಸಿರುವ ವಿವಿ ಮತ್ತೊಂದು ಕಡೆ ಪದವಿ ಪರೀಕ್ಷೆಗಳಿಗೆ ವೇಳಾಪಟ್ಟಿ ಪ್ರಕಟಿಸಿ ವಿದ್ಯಾರ್ಥಿಗಳ ಭವಿಷ್ಯ ದೊಂದಿಗೆ ಚೆಲ್ಲಾಟವಾಡು ತ್ತಿದೆಂದು ಎಂದು ವಿದ್ಯಾರ್ಥಿನಿಯರು ಬೆಂಗಳೂರು ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ವಿಶ್ವವಿದ್ಯಾನಿಲಯ ವೇಳಾಪಟ್ಟಿ  ಹಿಂದಕ್ಕೆ ಪಡೆದು ಪರೀಕ್ಷೆ ಗಳನ್ನು ಹಿಂದಿನಂತೆ ನವೆಂಬರ್‌ಗೆ ಮುಂದೂಡ ದಿದ್ದರೆ ಜಿಲ್ಲೆಯಾದ್ಯಂತ ಪದವಿ ವಿದ್ಯಾರ್ಥಿಗಳನ್ನು ಸಂಘಟಿಸಿ ಹೋರಾಟ ನಡೆಸುವುದಾಗಿ ಎಚ್ಚರಿಸಿ ಕಾಲೇಜಿನ ಪ್ರಾಚಾರ್ಯ  ಜಿ.ಕೃಷ್ಣ ಮೂರ್ತಿ ಅವರಿಗೆ ಮನವಿ ಸಲ್ಲಿಸಿ ದರು.ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾ ಘಟಕದ ಉಪಾಧ್ಯಕ್ಷ ಕುಂದುಲ ಗುರ್ಕಿ ಕೆ.ಎನ್ . ಮುನೀಂದ್ರ, ಮುಖಂಡ ರಾದ ಬಾಬುರೆಡ್ಡಿ, ಸರಿತಾ, ಶ್ರಿಮತಿ, ಗಾಯಿತ್ರಿ, ಗೌಸಿಯಾ, ಗಾಯಿತ್ರಿ, ಮುಬಾರಕ್, ಸೌಮ್ಯ ಪ್ರೀತಿ, ಚೈತ್ರಾ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.