ಪರೀಕ್ಷೆ ರದ್ದತಿಗೆ ಡಿಸಿ ಶಿಫಾರಸು

7

ಪರೀಕ್ಷೆ ರದ್ದತಿಗೆ ಡಿಸಿ ಶಿಫಾರಸು

Published:
Updated:

ಬೀದರ್: ಕುವೆಂಪು ವಿಶ್ವವಿದ್ಯಾಲಯದ ಅಂಚೆ ತೆರಪಿನ ಸ್ನಾತಕೋತ್ತರ ಪರೀಕ್ಷೆಗಳು ನಡೆಯುತ್ತಿದ್ದ ಇಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ  ಪಂಚಾ ಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿದ್ದ ತಂಡ, ಸಾಮೂಹಿಕ ನಕಲು ಆಗುತ್ತಿದ್ದುದನ್ನು ಪತ್ತೆ ಹಚ್ಚಿದೆ.ವಿದ್ಯಾನಗರದಲ್ಲಿರುವ ವಿದ್ಯಾ ಪಿಯು ಕಾಲೇಜಿನಲ್ಲಿ ಶನಿವಾರ ನಡೆದ ಸ್ನಾತಕೋತ್ತರ ಕೋರ್ಸುಗಳ ಪರೀಕ್ಷೆಯ ಅವ್ಯವಸ್ಥೆ ಮತ್ತು ಸಾಮೂಹಿಕ ನಕಲು ಪತ್ತೆ ಹಚ್ಚಿದ ಡಿಸಿ ಡಾ. ಪಿ.ಸಿ.ಜಾಫರ್ ‘ಪರೀಕ್ಷೆ ರದ್ದುಪಡಿಸಬೇಕು’ ಎಂದು ವಿಶ್ವವಿದ್ಯಾಲಯದ ಕುಲಪತಿ ಅವರಿಗೆ ಶಿಫಾರಸು ಮಾಡಿದ್ದಾರೆ.‘ಸ್ಥಳದಲ್ಲಿ ಹೆಚ್ಚಿನ ಅವ್ಯವಸ್ಥೆ ಇದ್ದು, ಸಾಮೂಹಿಕ ನಕಲು ನಡೆಯುತ್ತಿತ್ತು. ಒಬ್ಬಿಬ್ಬರ ವಿರುದ್ಧ ಕ್ರಮ ತೆಗೆದು ಕೊಳ್ಳುವುದರಲ್ಲಿ ಅರ್ಥವಿಲ್ಲ. ಪರೀಕ್ಷೆ ಮುಂದೂಡಬೇಕು, ಉಸ್ತುವಾರಿ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಶಿಫಾರಸು ಮಾಡಿದ್ದೇವೆ’ ಎಂದು ಜಾಫರ್‌ ತಿಳಿಸಿದರು. ಸತ್ಯಂ ಕಾಲೇಜು ಅಧ್ಯಯನ ಕೇಂದ್ರದಲ್ಲಿ ಪರೀಕ್ಷೆ­ಗೆ ನೋಂದಾಯಿಸಿದ್ದ ಅಭ್ಯರ್ಥಿಗಳು ಪರೀಕ್ಷೆ ಯನ್ನು ಬರೆಯು ತ್ತಿದ್ದರು. ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾಮೂಹಿಕ ನಕಲು ಮತ್ತು ಪರೀಕ್ಷಾ ಅವ್ಯವಸ್ಥೆಯನ್ನು ಕುರಿತು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಗಾಂಧಿ ಗಂಜ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry