ಪರೀಕ್ಷೆ ವೇಳಾ ಪಟ್ಟಿ ಪರಿಷ್ಕರಿಸಿ

7

ಪರೀಕ್ಷೆ ವೇಳಾ ಪಟ್ಟಿ ಪರಿಷ್ಕರಿಸಿ

Published:
Updated:

ಕರ್ನಾಟಕ ಲೋಕ ಸೇವಾ ಆಯೋಗವು  ಕಳೆದ ನವೆಂಬರ್ 3ರಂದು `ಎ~ ಮತ್ತು `ಬಿ~ (ಕೆ.ಎ.ಎಸ್.) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ ಅಂತಿಮ ವರ್ಷದ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಪೂರ್ವಭಾವಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಿದೆ.

 

ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶ ಸಿಕ್ಕಂತೆ ಆಗಿದೆ.ಅದಕ್ಕಾಗಿ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಅಭಿನಂದನೆಗಳು.ಪೂರ್ವಭಾವಿ ಪರೀಕ್ಷೆಯನ್ನು 2012ರ ಏಪ್ರಿಲ್ 22ರಂದು (ಭಾನುವಾರ) ನಡೆಸಲು ಆಯೋಗವು ನಿರ್ಧರಿಸಿದೆ. ಆದರೆ ಏಪ್ರಿಲ್ 22ರಂದು ಮುಕ್ತ ವಿಶ್ವವಿದ್ಯಾನಿಲಯದ ಅಂತಿಮ ಬಿ.ಎ. ವಿದ್ಯಾರ್ಥಿಗಳಿಗೆ  ಐಚ್ಛಿಕ ಕನ್ನಡ ಮತ್ತು ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಿಗೆ `ಆದಾಯ ತೆರಿಗೆ ಕಾನೂನು~ ವಿಷಯದ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿ ವೇಳಾಪಟ್ಟಿ ಪ್ರಕಟಿಸಿದೆ.ಏ.22ರ ರಂದು ನಡೆಸಲು ಉದ್ದೇಶಿರುವ ಪರೀಕ್ಷೆಗಳ ದಿನಾಂಕವನ್ನು ಪರಿಷ್ಕರಿಸಬೇಕೆಂದು ವಿನಂತಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry