ಪರೀಕ್ಷೆ ಸಮಯದಲ್ಲಿವಿದ್ಯುತ್ ಪೂರೈಸಿ

7

ಪರೀಕ್ಷೆ ಸಮಯದಲ್ಲಿವಿದ್ಯುತ್ ಪೂರೈಸಿ

Published:
Updated:

ಬಾಗೇಪಲ್ಲಿ: ಮುಂಬರುವ ಮಾರ್ಚ್, ಏಪ್ರಿಲ್ ವೇಳೆಗೆ ಶಾಲಾ, ಕಾಲೇಜು ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳ ವ್ಯಾಸಂಗದ ದೃಷ್ಟಿಯಿಂದ  ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಬೆಸ್ಕಾಂ ಸೂಚಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಅವರ ಅಧ್ಯಕ್ಷತೆ ಯಲ್ಲಿ ತಾಲ್ಲೂಕು ಮಟ್ಟದ ಪ್ರಗತಿ ಪರಿ ಶೀಲನಾ ಸಭೆಯಲ್ಲಿ ಮಾತನಾಡುತ್ತಾ,

 ತಾಲ್ಲೂಕಿನ ದಿಗವನೆಟ್ಟಕುಂಟಪಲ್ಲಿ ಗ್ರಾಮದ ಹಿರಿಯ ಸರ್ಕಾರಿ ಶಾಲೆಯಲ್ಲಿ ಸುಮಾರು 1.75 ಲಕ್ಷ  ರೂಪಾಯಿ ದುರು ಪಯೋಗವಾಗಿದೆ. ಇದರಿಂದ ಶೌಚಾಲಯ ಹಾಗೂ ಅಡುಗೆಕೋಣೆ ನಿರ್ಮಾಣ ಸೂಕ್ತ ರೀತಿಯಲ್ಲಿ ಆಗಿಲ್ಲ.ಸದರಿ 2 ಬಗೆಯ ಚೆಕ್ ಅನ್ನು ಕಿರಿಯ ಎಂಜಿನಿಯರ್ ಇಮಾಂಸಾಬ್‌ರ ಹೆಸರಿನಲ್ಲಿ ಡ್ರಾ ಮಾಡಲಾಗಿದೆ. ಎಂಜಿನಿಯರ್ ಆಗಿ ಹಣ ಹೇಗೆ ಡ್ರಾ ಮಾಡಲಾಗಿದೆ ಎಂದು ಎಂಜಿನಿಯರ್ ವಿರುದ್ಧ ಕೆಂಡಾಮಂಡಲವಾದರು.

ತಾಲ್ಲೂಕಿನಲ್ಲಿ ಅಕ್ಷರ ದಾಸೋಹ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಸಾಗಣೆ ಆಗುತ್ತಿದೆ.  ಮೂಟೆಗೆ 10 ಕೆಜಿ ಅಕ್ಕಿ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದ ಅವರು ಯಂತ್ರದ ದೋಷದಿಂದ ಗೋದಾಮುಗಳಲ್ಲಿ ಇದು ನಡೆ ಯುತ್ತಿದ್ದೆ ಯೇ ಎಂದು ಆಕ್ರೋಶ ವ್ಯಕ್ತಪಡಿಸಿ, ಶಾಲೆಗಳಿಗೆ ಸಮರ್ಪಕವಾಗಿ ಭೇಟಿ ನೀಡದೆ ನಿರ್ಲಕ್ಷ್ಯದಿಂದ ವರ್ತಿಸ ಲಾಗುತ್ತಿದೆ ಎಂದು ಅಕ್ಷರ ದಾಸೋಹದ ಸಹಾಯಕ ನಿದೇರ್ಶಕ ಲಕ್ಷ್ಮಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. `ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಜಾನುವಾರು ಗಳಿಗೆ ನೀಡುವ ವ್ಯವಸ್ಥೆ ಗಿಂತಲೂ ಕೆಟ್ಟ ದಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ನೀಡಿದ ನೋಟಿಸ್‌ಗೆ ಇದುವರಿಗೂ ಸಮಂಜಸ ಉತ್ತರ ನೀಡಿಲ್ಲ. ತಾಲ್ಲೂಕಿನ ಅಧಿಕಾರಿಯಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸ ಬೇಕು~ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾವಿತ್ರಮ್ಮ  ಹೇಳಿದರು.ಸ್ಥಾಯಿ ಸಮಿತಿ ಅಧ್ಯಕ್ಷೆ ಅಮರಾವತಿ, ಸದಸ್ಯರಾದ ಹರಿನಾಥರೆಡ್ಡಿ, ನಾರಾ ಯಣಮ್ಮ, ಸಹಾಯಕ ಕಾರ್ಯದರ್ಶಿ ವೆಂಕಟರವಣಪ್ಪ, ತಹಸೀಲ್ದಾರ್ ಟಿ.ಎ. ಹನುಮಂತರಾಯ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಯರಾಂ ಮತ್ತಿ ತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry