ಪರೀಕ್ಷೆ ಸ್ಪರ್ಧಾತ್ಮಕವಾಗಿ ಸ್ವೀಕರಿಸಿ

7

ಪರೀಕ್ಷೆ ಸ್ಪರ್ಧಾತ್ಮಕವಾಗಿ ಸ್ವೀಕರಿಸಿ

Published:
Updated:

ಹೊಸದುರ್ಗ: ಪರೀಕ್ಷೆಗಳು ಕೇವಲ ಅಂಕಗಳಿಗೆ ಮಾತ್ರ ಎನ್ನುವ ಮನೋಭಾವ ವಿದ್ಯಾರ್ಥಿಗಳಿಂದ ದೂರಾಗಬೇಕು ಎಂದು ಡಿಡಿಪಿಐಕೆ. ಶಂಕರಪ್ಪ ಹೇಳಿದರು.ಇಲ್ಲಿನ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಈಚೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಮಕ್ಕಳೇ ಪರೀಕ್ಷೆಗೆ ಸಿದ್ದರಾಗಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪರೀಕ್ಷೆಯನ್ನು ಭೀತಿಯಿಂದ ಎದುರಿಸದೇ ಅದೊಂದು ಹಬ್ಬ ಎಂದು ತಿಳಿದುಕೊಂಡರೆ ಆತಂಕ ಹಾಗೂ ಉದ್ವೇಗ ಕಡಿಮೆಯಾಗುತ್ತದೆ ಎಂದು ಹೇಳಿದರು.ಶಾಲೆಯಲ್ಲಿ ಏಕಾಗ್ರತೆಯಿಂದ ಪಾಠಕೇಳುವುದರ ಜತೆಗೆ ಮನೆಯಲ್ಲಿಯೂ ಆಸಕ್ತಿಯಿಂದ ಅಭ್ಯಾಸ ಮಾಡಿ ಪ್ರಮುಖ ಘಟ್ಟವಾದ ಪರೀಕ್ಷೆಯನ್ನು ಆತ್ಮವಿಶ್ವಾಸದೊಂದಿಗೆ ಎದುರಿಸಬೇಕು ಎಂದರು,ಡಾ.ಕಿಶೋರ್ ಪರೀಕ್ಷೆ ಸಿದ್ಧತೆ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಂ.ಎಸ್. ಜಯಸ್ವಾಮಿ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಡಿ.ಕೆ. ಶೀಲಾ, ಜಗದಂಬಾ, ವಿಷಯ ಪರಿವೀಕ್ಷಕ ಸಿ.ಆರ್. ಯೋಗೀಶ್, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ ಸುಮಾರು 800 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಟರಾಜ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಂ. ಶಿವಲಿಂಗಪ್ಪ ವಂದಿಸಿದರು.ಪರೀಕ್ಷೆಯೊಂದು ಸಂಭ್ರಮ: ಜೆಸಿಐ ಹೊಸದುರ್ಗ ವೇದಾ ಸಂಸ್ಥೆ ಪಟ್ಟಣದ ಎಸ್‌ಡಿಎ ಶಾಲೆಯಲ್ಲಿ ಈಚೆಗೆ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಒಂದು ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಜೆಸಿಐ ನ ವಲಯ ತರಬೇತುದಾರ ಎಚ್.ಎಸ್ ನವೀನ್‌ಕುಮಾರ್, ಪರೀಕ್ಷೆಯನ್ನು  ಭೂತ ಎಂದುಕೊಳ್ಳುವ ಬದಲಾಗಿ ಅದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಬೇಕು ಎಂದರು.ಯೋಜನಾಬದ್ಧವಾದ ಅಭ್ಯಾಸ ಮಾಡಿದ ವಿದ್ಯಾರ್ಥಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಾಧ್ಯ. ವಿದ್ಯಾರ್ಥಿಗಳು ಆತಂಕ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಸಲಹೆ ಮಾಡಿದರು.ಜೆಸಿಐ ಸಂಸ್ಥೆ ಕಾರ್ಯದರ್ಶಿ ವಿ.ಎಂ. ಮುಕುಂದನ್, ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಕೆ.ಪಿ ಮೋಹನಪ್ರಸಾದ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry