ಗುರುವಾರ , ನವೆಂಬರ್ 21, 2019
21 °C

ಪರೋಕ್ಷ ತೆರಿಗೆ ಸಂಗ್ರಹ

Published:
Updated:

ಕೋಲ್ಕತ್ತ (ಪಿಟಿಐ): ಪರಿಷ್ಕೃತ ಅಂದಾಜು ಪ್ರಕಾರ 2012-13ನೇ ಸಾಲಿನಲ್ಲಿ ಪರೋಕ್ಷ ತೆರಿಗೆ ಸಂಗ್ರಹ ರೂ. 4.6 ಲಕ್ಷ ಕೋಟಿ ದಾಟಲಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿ ಸುಮಿತ್ ಬೋಸ್ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಕೇಂದ್ರ ಅಬಕಾರಿ ತೆರಿಗೆ, ಸೀಮಾ ಸುಂಕ ಮತ್ತು ಸೇವಾ ತೆರಿಗೆ ಮೂಲಕ ಪ್ರಸಕ್ತ ಸಾಲಿನಲ್ಲಿ ವರಮಾನ ಹೆಚ್ಚಿದ್ದು, ಸಂಗ್ರಹವಾದ ತೆರಿಗೆ ಮೊತ್ತದ ಸ್ಪಷ್ಟ ಚಿತ್ರಣ ಏ. 20ರ ನಂತರ ಲಭಿಸಲಿದೆ ಎಂದರು.2012-13ನೇ ಸಾಲಿನಲ್ಲಿ ನೇರ ಮತ್ತು ಪರೋಕ್ಷ ತೆರಿಗೆ ಮೂಲಕ ಒಟ್ಟು ರೂ.10.3 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.

ಪ್ರತಿಕ್ರಿಯಿಸಿ (+)