ಬುಧವಾರ, ಅಕ್ಟೋಬರ್ 16, 2019
21 °C

ಪರ್ತ್ : 161ಕ್ಕೆ ಭಾರತ ಆಲ್ ಔಟ್

Published:
Updated:

ಪರ್ತ್ (ಐಎಎನ್ಎಸ್): ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾದ ಮೂರನೇ ಟೆಸ್ಟ್ ನ ಮೊದಲ ದಿನದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತವು 161 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಗಳನ್ನು ಕಳೆದು ಕೊಂಡಿದೆ.

ದಿನದ ಆಟದಲ್ಲಿ ವಿರಾಟ್ ಕೊಹ್ಲಿ ಅವರು ಒಟ್ಟು 44 ರನ್ ಗಳಿಸಿದ್ದಾರೆ. ಭಾರತೀಯ ಆಟಗಾರರಲ್ಲಿ ವಿರಾಟ್ ಅಧಿಕ ರನ್ ಗಳನ್ನು ಗಳಿಸಿದರು.

 

ವಿ.ವಿ.ಎಸ್. ಲಕ್ಷ್ಮಣ್ ಮತ್ತು ಗೌತಮ್ ಗಂಭೀರ್  ಅವರು ತಲಾ 31 ರನ್ ಗಳನ್ನು ಗಳಿಸಿದ್ದಾರೆ. ಈ ಸರಣಿಯಲ್ಲಿ ಅಧಿಕ ವಿಕೆಟ್ ಪಡೆಯುತ್ತಿರುವ ಆಸ್ಟ್ರೇಲಿಯಾ ತಂಡದ  ಆಟಗಾರ ಬೆನ್ ಹಿಲ್ಫೆನ್ಹಾಸ್ ಅವರು, 43 ರನ್ ಗಳಿಗೆ ನಾಲ್ಕು ವಿಕೆಟ್ ಪಡೆದಿದ್ದಾರೆ.           

Post Comments (+)