ಪರ್ಯಾಯ ವ್ಯವಸ್ಥೆ ಬೇಕು

ಗುರುವಾರ , ಜೂಲೈ 18, 2019
24 °C

ಪರ್ಯಾಯ ವ್ಯವಸ್ಥೆ ಬೇಕು

Published:
Updated:

ಡಾಲರ್ ಹುಲಿ ಜಗತ್ತಿನ ಬಹುತೇಕ ದೇಶಗಳ ಎಲ್ಲಾ ಹಣ ಕಬಳಿಸುತ್ತಿದೆ. ಒಂದು ಸಮಯದಲ್ಲಿ ಭಾರತದ ರೂಪಾಯಿ ಡಾಲರ್‌ಗೆ ನಾಲ್ಕು ರೂಪಾಯಿ ಗಳಿಸಿತ್ತು. ತನ್ನ ಮೌಲ್ಯವನ್ನು ರೂಪಾಯಿ ಬಹುತೇಕ ಕಳೆದು ಕೊಳ್ಳುತ್ತಿರುವುದರೊಂದಿಗೆ ಜನರನ್ನು ಹೈರಾಣ ಮಾಡುತ್ತಿದೆ.

ಜಗತ್ತಿನ ವ್ಯವಹಾರಗಳೆಲ್ಲಾ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಈ ಡಾಲರ್‌ನಿಂದಲೇ ಮಾಡಲಾಗುತ್ತಿದೆ. ಯಾವುದೇ ದೇಶ ತನ್ನ `ಕರೆನ್ಸಿ' ಅಥವಾ ಚಲಾವಣೆಯಲ್ಲಿರುವ ಹಣವನ್ನು ಈ ಡಾಲರ್‌ಗೆ ಹೋಲಿಸಿ ತನ್ಮೂಲಕ ಅದರ ಮೌಲ್ಯ ಗುರುತಿಸಿ ವ್ಯವಹರಿಸುತ್ತವೆ.ಯಾವ ದೇಶ ಈ `ಡಾಲರ್'ನ್ನು ಹೆಚ್ಚೆಚ್ಚು ಹೊಂದಿದಷ್ಟೂ ಆ ದೇಶ ಶ್ರೀಮಂತವೆಂದು ಬಿಂಬಿಸಲಾಗುತ್ತಿದೆ. ಇದರಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಕುಸಿಯುವುದಿಲ್ಲ! ಅದು ಹುಲಿಯಾಗಿಯೇ ಇರುತ್ತದೆ.ಬೆಲೆ ಏರಿಕೆ, ಸರ್ಕಾರ ತೆರಿಗೆ ವಿಧಿಸುವುದು, ಹೀಗೆ ಕೊರತೆ ತುಂಬಿಕೊಳ್ಳಲು ಸರ್ಕಾರಗಳು ಜನರ ಜೀವ ಹಿಂಡುತ್ತಿವೆ. ಆದರೆ ಈ ಡಾಲರ್‌ನಿಂದ ದೂರವಿದ್ದು ಜಗತ್ತಿನ ರಾಷ್ಟ್ರಗಳೆಲ್ಲಾ ಬೇರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿಲ್ಲ. ಅರ್ಥಶಾಸ್ತ್ರಜ್ಞರೆಲ್ಲಾ ಇದರ ಕಪಿಮುಷ್ಟಿಯಲ್ಲಿ ಸಿಲುಕಿದ್ದರಿಂದ ಶ್ರೀಸಾಮಾನ್ಯನ ಕಷ್ಟ ಪರಿಹರಿಸುವುದು ಸಾಧ್ಯವಾಗುತ್ತಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry