ಪರ್ಯಾಯ ಶಕ್ತಿ ಅನಿವಾರ್ಯ

7

ಪರ್ಯಾಯ ಶಕ್ತಿ ಅನಿವಾರ್ಯ

Published:
Updated:

ಬೆಂಗಳೂರು: `ಜಾತ್ಯತೀತ ಸಿದ್ದಾಂತಗಳಲ್ಲಿ ನಂಬಿಕೆಯುಳ್ಳ ಸಮಾನ ಮನಸ್ಕರು ಒಗ್ಗೂಡಿದಲ್ಲಿ 2018ರ ವಿಧಾನಸಭೆ ಚುನಾವಣೆ ವೇಳೆಗೆ ಜೆ.ಎಚ್. ಪಟೇಲರ ಯುಗ ಮರುಕಳಿಸಬಹುದು~ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ನ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ ಸೋಮವಾರ ಇಲ್ಲಿ ಭವಿಷ್ಯ ನುಡಿದರು.  ಜೆ.ಎಚ್. ಪಟೇಲ್ ಪ್ರತಿಷ್ಠಾನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್. ಪಟೇಲ್ ಅವರ 83ನೇ ಜನ್ಮ ದಿನಾಚರಣೆ ಅಂಗವಾಗಿ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಪ್ರಸ್ತುತ ರಾಜಕಾರಣ: ಭವಿಷ್ಯದ ನನ್ನ ಹೆಜ್ಜೆಗಳು~ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ದೇಶದಲ್ಲಿಯೇ ಬಿಜೆಪಿ ಹಾಗೂ ಕಾಂಗ್ರೆಸ್‌ನ ಬಲ ಕುಸಿಯುತ್ತಿರುವ ಸನ್ನಿವೇಶದಲ್ಲಿ ಮೂರನೇ ಹಾಗೂ ಪರ್ಯಾಯ ರಾಜಕೀಯ ಶಕ್ತಿ ಬೆಳೆಯುವುದು ಅನಿವಾರ್ಯವಾಗಿದೆ. ಆದರೆ, ಅಂತಹ ಶಕ್ತಿಯನ್ನು ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ, ಸಮಾನ ಮನಸ್ಕರೆಲ್ಲಾ ಮುಖ್ಯಮಂತ್ರಿ ಸ್ಥಾನದ ಆಸೆ ಬಿಟ್ಟು ಒಂದಾದರೆ ಮುಂದಿನ ಐದು ವರ್ಷಗಳಲ್ಲಿ ಪರ್ಯಾಯ ರಾಜಕೀಯ ಪಕ್ಷವನ್ನು ಬಲಗೊಳಿಸಬಹುದು~ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ವಿಚಾರ ಸಂಕಿರಣವನ್ನು ಸಂಸದ ಡಿ.ಬಿ. ಚಂದ್ರೇಗೌಡ ಉದ್ಘಾಟಿಸಿದರು. ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಶಾಸಕ ಆರ್. ರೋಷನ್‌ಬೇಗ್, ಉದ್ಯಮಿ ಹರಿಖೋಡೆ ಮಾತನಾಡಿದರು. ಮಾಜಿ ಶಾಸಕ ಮಹಿಮ ಪಟೇಲ್ ಆಶಯ ನುಡಿಗಳನ್ನಾಡಿದರು.  ಶಾಸಕ ಎಚ್.ಎಸ್. ಮಹದೇವ ಪ್ರಸಾದ್ ಸ್ವಾಗತಿಸಿದರು. ಜೆ.ಎಚ್. ಪಟೇಲರ ಪತ್ನಿ ಸರ್ವಮಂಗಳಾ ಪಟೇಲ್, ಸಹೋದರ ಎಸ್.ಎಚ್. ಪಟೇಲ್, ಲೇಖಕಿ ಅನಸೂಯ ಬಸಪ್ಪ ಉಪಸ್ಥಿತರಿದ್ದರು.  ಸಮಾರಂಭದಲ್ಲಿ ಅನಸೂಯ ಬಸಪ್ಪ ರಚಿಸಿದ `ನನ್ನ ತವರು~ ಕೃತಿಯನ್ನು ಚಂದ್ರೇಗೌಡ ಬಿಡುಗಡೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry