ಬುಧವಾರ, ಅಕ್ಟೋಬರ್ 16, 2019
21 °C

ಪರ್ಯಾಯ: ಹೊರೆಕಾಣಿಕೆ ಸಮರ್ಪಣೆ

Published:
Updated:

ಉಡುಪಿ: ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥರ ಪರ್ಯಾಯ ಮಹೋತ್ಸವಕ್ಕಾಗಿ ಹೊರೆಕಾಣಿಕೆ ಸಲ್ಲಿಕೆ ಶುಕ್ರವಾರದಿಂದ ಪ್ರಾರಂಭವಾಗಿದೆ.  ಮಾಜಿ ಶಾಸಕ ಯು.ಆರ್. ಸಭಾಪತಿ ಅವರ ನೇತೃತ್ವದಲ್ಲಿ ಹಿರಿಯಡ್ಕ ಗ್ರಾಮಸ್ಥರು, ಬೊಮ್ಮರಬೆಟ್ಟು ಗ್ರಾ.ಪಂ ಸಹಿತ ವಿವಿಧ ಸಂಘಟನೆಗಳ ಹೊರೆಕಾಣಿಕೆ ಯನ್ನು ಮಠಕ್ಕೆ ಸಲ್ಲಿಸಲಾಯಿತು. ಹಿರಿಯಡ್ಕದಿಂದ  ಹೊರಟ ಮೆರವಣಿಗೆ ಕಡಿಯಾಳಿ ಮಾರ್ಗವಾಗಿ ಸರ್ವಿಸ್ ಬಸ್ ನಿಲ್ದಾಣ, ಸಂಸ್ಕೃತ ಕಾಲೇಜು ಮೂಲಕ ರಥಬೀದಿ ತಲುಪಿತು.ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟಬಲ್ ಟ್ರಸ್ಟ್, ಸರ್ವೋತ್ತಮ ಪೈ ಮತ್ತು ಮಕ್ಕಳು, ಸತೀಶ್ಚಂದ್ರ ಹೆಗ್ಡೆ ಸ್ಮಾರಕ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಗಣೇಶ್ ಕಲಾಮಂದಿರ, ಲಯನ್ಸ್ ಕ್ಲಬ್ ಹಿರಿಯಡ್ಕ, ದೇವಾಡಿಗರ ಸಂಘ, ಪದವಿ ಪೂರ್ವ ಕಾಲೇಜು ಹಿರಿಯಡ್ಕ ಮತ್ತಿತರ ಸಂಸ್ಥೆಗಳು ಈ ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದವು.`ಹರೇ ರಾಮ ಹರೇ ಕೃಷ್ಣ~ ಪಂಥದವರಿಂದ  ಪರಂಪರದಾಸ್ ಅವರ ನೇತೃತ್ವದಲ್ಲಿ ನಿತ್ಯಾನಂದ ಮಂದಿರದಿಂದ ಹೊರಟ  ಹೊರೆಕಾಣಿಕೆ ಮೆರವಣಿಗೆ  ಸಂಸ್ಕೃತ ಕಾಲೇಜು ಮೂಲಕ  ರಥಬೀದಿ ತಲುಪಿತು. ಈ ಮೆರವಣಿಗೆಯನ್ನು ಮಠದ ಆನೆಯ ಸ್ವಾಗತದೊಂದಿಗೆ ಕೊಡವೂರಿನ ಮಹಿಳಾ ಚಂಡೆಬಳಗ, ಕೊಂಬು ಕಹಳೆ ಸಾಥ್‌ನೊಂದಿಗೆ ಮಠಕ್ಕೆ ಕರೆತರಲಾಯಿತು.

Post Comments (+)