ಸೋಮವಾರ, ಜುಲೈ 26, 2021
21 °C

ಪರ್ಲ್‌ನಿಂದ್ ರಿಟೇಲ್ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ಲ್‌ನಿಂದ್ ರಿಟೇಲ್ ಕಾರ್ಯಾಗಾರ

ಚೆನ್ನೈಯ ರಿಟೇಲರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಸಹಯೋಗದೊಂದಿಗೆ ಪರ್ಲ್ ಅಕಾಡೆಮಿ ಆಫ್ ಫ್ಯಾಶನ್ ದಕ್ಷಿಣ ಭಾರತದ ವಿವಿಧ ನಗರಗಳಲ್ಲಿ ರಿಟೇಲ್ ಟ್ಯಾಲೆಂಟ್ ಡೆವಲಪ್‌ಮೆಂಟ್ ಕಾರ್ಯಾಗಾರಗಳ ಸರಣಿ ನಡೆಸುತ್ತಿದೆ.ಅದರ ಅಂಗವಾಗಿ ಬೆಂಗಳೂರಿನ ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್‌ನಲ್ಲಿ ನಡೆದ ಕಾರ್ಯಾಗಾರದಲ್ಲಿ ಪರಿಣಿತರು  ಅತ್ಯಂತ ಸ್ಪರ್ಧಾತ್ಮಕ ಮತ್ತು ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಿಟೇಲ್ ಮ್ಯಾನೇಜ್‌ಮೆಂಟ್, ಮಾರ್ಕೆಟಿಂಗ್, ಡಿಸೈನ್, ಫ್ಯಾಶನ್ ಮತ್ತು ಸಿದ್ಧ ಉಡುಪು ಉದ್ಯಮ, ಅದರಲ್ಲಿ ಉದ್ಯೋಗಾವಕಾಶದ ಬಗ್ಗೆ ಮಾರ್ಗದರ್ಶನ ನೀಡಿದರು.ಅಲ್ಲದೆ ಇಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಮತ್ತು ಅಭಿರುಚಿಯನ್ನು ಪ್ರದರ್ಶಿಸಲು, ಅಂತರ್ಜಾಲ ನಿರ್ಮಿಸಲು ಕೂಡ ಅವಕಾಶ ಇತ್ತು.ಪಿಎಎಫ್ ಚೆನ್ನೈನ ನಿರ್ದೇಶಕ ಎಸ್.ರಾಮಲಿಂಗಂ, ರಿಟೇಲ್ ಕನ್ಸಲ್ಟೆಂಟ್ ಸೋಮಸುಂದರಂ, ಲೈಫ್‌ಸ್ಟೈಲ್ ಮಾಜಿ ಉಪಾಧ್ಯಕ್ಷ  ಶ್ರೀಧರ್, ಲೈಮ್ ಅಂಡ್ ವೋಡ್ಕಾ ಪಾಲುದಾರ ಬಾಲಚಂದರ್, ಪರ್ಲ್ ಅಕಾಡೆಮಿಯ ಅಧ್ಯಾಪಕ  ವಿ.ಜಿ. ವೆಂಕಟೇಶ್ ವಿದ್ಯಾರ್ಥಿಗಳ ಸಂದೇಹಗಳಿಗೆ ಉತ್ತರಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.