ಪಲಾಶ್ ಪ್ರಿಯಾ `ಆಗಮನ'

7

ಪಲಾಶ್ ಪ್ರಿಯಾ `ಆಗಮನ'

Published:
Updated:

ನಗರದ ರಿನೈಸೆನ್ಸ್ ಗ್ಯಾಲರಿ ಮತ್ತೊಂದು ಯುವ ಕಲಾವಿದರ ಸಮೂಹ ಪ್ರದರ್ಶನವನ್ನು ಏರ್ಪಡಿಸಿದೆ. ಬಂಗಾಳಿ ಕಲಾವಿದೆ ಪಲಾಶ್‌ಪ್ರಿಯಾ ಘೋಷ್, ಪ್ರಥಮ್ ಕಾರಣಿಕ್, ಕಟ್ಟಮಂಚಿ ರಮೇಶ್, ಯಶ್ವಂತ್ ಶಿರವಾಳಕರ್ ಮುಂತಾದವರು ತಮ್ಮ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ.ಪಲಾಶ್‌ಪ್ರಿಯಾ ಘೋಷ್ ತಮ್ಮ ಕಲಾಕೃತಿಗಳ ಸಂಗ್ರಹಕ್ಕೆ `ಆಗಮನ್' ಎಂದು ಹೆಸರಿಸಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ ವಿದ್ಯಾರ್ಥಿನಿಯಾಗಿದ್ದ ಪಲಾಶ್‌ಪ್ರಿಯಾ ಸದ್ಯ ಮುಂಬೈ ನಿವಾಸಿಯಾಗಿದ್ದಾರೆ. ಅಲ್ಲಿಯ ಶಾಲಾ ಮಕ್ಕಳಿಗೆ ಕಲೆಯನ್ನು ಹೇಳಿಕೊಡುತ್ತಾರೆ. ಅಕ್ರಿಲಿಕ್ ಇವರ ಮೂಲ ಮಾಧ್ಯಮ. ಸ್ತ್ರೀ ಸಂವೇದನೆಗಳಿಗೆ ರೇಖೆ ಎಳೆಯುವುದು, ಬಣ್ಣ ತುಂಬುವುದು ಇವರ ನೆಚ್ಚಿನ ಕೆಲಸ. ಸ್ತ್ರೀ ಭಾವನಾ ಲೋಕಕ್ಕೆ ಒಂದು ಮೂರ್ತ ರೂಪ ನೀಡುವುದು ಇವರ ಕಲೆಯ ಉದ್ದೇಶವಂತೆ.ಮಹಿಳೆಯ ಮನದೊಳಗಣ ಸಂಘರ್ಷ, ತುಮುಲ, ಗೊಂದಲಗಳನ್ನು ಕ್ಯಾನ್ವಾಸ್ ಮೇಲೆ ಮೂಡಿಸುವುದು ಇಷ್ಟದ ಕೆಲಸವಂತೆ. ಅದೇ ಕಾರಣಕ್ಕೆ, ಕಪ್ಪು, ಬಿಳುಪು ಹಾಗೂ ಬೂದುವರ್ಣಗಳಲ್ಲಿ ಇವನ್ನು ಬಿಡಿಸುವುದು ಪಲಾಶ್‌ಪ್ರಿಯಾ ಹವ್ಯಾಸ ಎಂದು ಹೇಳಿಕೊಂಡಿದ್ದಾರೆ. ಮಹಿಳೆಯರ ಭಾವಯಾನದ ವಿವಿಧ ಕೊಂಡಿಗಳನ್ನು ಈ ಕಲಾಕೃತಿಗಳು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರಥಮ್ ಕಾರಣಿಕ್ ಜಲವರ್ಣಗಳಲ್ಲಿ ಬೆಂಗಳೂರನ್ನು ಅನಾವರಣ ಮಾಡಿದ್ದಾರೆ.ನಗರದೊಂದಿಗೆ ಬಾಲ್ಯದ ದಿನಗಳನ್ನು ತಳಕು ಹಾಕಿಕೊಂಡಿರುವ ಈ ಕಲಾವಿದ ಜಲವರ್ಣದ ತಂತ್ರಗಳನ್ನು ಕಲಾವಿದ ಎಸ್.ಎಂ. ವಾಲಿ ಅವರ ಬಳಿ ಕಲಿತಿದ್ದಾರಂತೆ. ಕರಾವಳಿಯ ಹೊನ್ನಾವರದಲ್ಲಿ ತಮ್ಮ ರಜೆಗಳನ್ನು ಕಳೆಯುತ್ತಿದ್ದ ಪ್ರಥಮ್, ವಾಷಿಂಗ್ಟನ್ ಡಿ.ಸಿಯಲ್ಲಿ ತಮ್ಮ ಹರೆಯದ ದಿನಗಳನ್ನು ಕಳೆದಿದ್ದಾರೆ. ಬೆಂಗಳೂರಿನ ದೃಶ್ಯಗಳನ್ನು ಲ್ಯಾಂಡ್‌ಸ್ಕೇಪ್‌ನಲ್ಲಿ ಚೌಕಟ್ಟಿಗೆ ಹಾಕಿಡುವುದು ಪ್ರೀತಿಯ ಕೆಲಸವಂತೆ. ಇವರ ಕಲಾಕೃತಿಗಳೂ ಪ್ರದರ್ಶನದಲ್ಲಿ ಸೇರಿವೆ.ಡಿ.3ರಿಂದ 7ರವರೆಗೆ ರಿನೈಸನ್ಸ್ ಗ್ಯಾಲರಿ (ಕನಿಂಗ್‌ಹ್ಯಾಮ್ ರಸ್ತೆ)ಯಲ್ಲಿ ಸಮಯ: ಬೆಳಗಿನ 11ರಿಂದ ಸಂಜೆಯ 7ರವರೆಗೆ ಪ್ರದರ್ಶನ ನಡೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry