ಪಲ್ಸ್ ಪೋಲಿಯೊ ಜಾಗೃತಿ ರ್ಯಾಲಿ

7

ಪಲ್ಸ್ ಪೋಲಿಯೊ ಜಾಗೃತಿ ರ್ಯಾಲಿ

Published:
Updated:

ಔರಾದ್: ಭಾನುವಾರದಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗಾಗಿ ಶನಿವಾರ ಪಟ್ಟಣದಲ್ಲಿ ಜಾಗೃತಿ ರ್ಯಾಲಿ ನಡೆಯಿತು. ಇದೇ 27, 28 ಮತ್ತು ಮಾರ್ಚ್ 1,2ರಂದು ನಡೆಯಲಿರುವ ಪೋಲಿಯೊ ಕಾರ್ಯಕ್ರಮದಲ್ಲಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯ ಪೋಲಿಯೊ ಲಸಿಕೆ ಕೊಡಿಸುವ ಬ್ಯಾನರ್ ಮತ್ತು ಘೋಷಣೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಯಿತು.ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ರ್ಯಾಲಿಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ತಾಲ್ಲೂಕಿನಲ್ಲಿ ಇನ್ನು 37,020 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಬೇಕಾಗಿದೆ. ಭಾನುವಾರ ಬೂತ್ ಮಟ್ಟದಲ್ಲಿ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಉಳಿದ ಮೂರು ದಿನಗಳ ಕಾಲ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಹೋಗಿ ಲಸಿಕೆ ಹಾಕಲಿದ್ದಾರೆ. ಈ ಕೆಲಸಕ್ಕಾಗಿ 332 ಸಿಬ್ಬಂದಿಗಳು ಇದ್ದಾರೆ.36 ಜನ ನೌಕರರು ಇದರ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ವೈದ್ಯಾಧಿಕಾರಿ ಡಾ. ಮೋಹನ ಜಾಧವ್ ತಿಳಿಸಿದ್ದಾರೆ. ಶಿಕ್ಷಣ ಇಲಾಖೆ ಗುರುನಾಥ ತವಾಡೆ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry