ಪಲ್ಸ್ ಪೋಲಿಯೊ: ತಾಲ್ಲೂಕಿನಲ್ಲಿ 29782 ಮಕ್ಕಳಿಗೆ ಲಸಿಕೆ

7

ಪಲ್ಸ್ ಪೋಲಿಯೊ: ತಾಲ್ಲೂಕಿನಲ್ಲಿ 29782 ಮಕ್ಕಳಿಗೆ ಲಸಿಕೆ

Published:
Updated:

ದೇವದುರ್ಗ: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಭಾನುವಾರ ಪಟ್ಟಣ ಸೇರಿದಂತೆ ತಾಲ್ಲೂಕಿನ 8 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಐದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಬಸ್ಸಪ್ಪ ನಾಗೋಲಿ ಚಾಲನೆ ನೀಡಿದರು.ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಪಟ್ಟಣದ ತಿಲಕ್ ವಾರ್ಡಿನಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಭಾಗವಹಿಸಿ ಐದು ವರ್ಷದ ಒಳಗಿನ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಾಲಕರು ಕಡ್ಡಾಯವಾಗಿ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿ ಮಗುವಿಗೆ ಭವಿಷ್ಯದಲ್ಲಿ ಎದುರಾಗುವ ಅನಾರೋಗ್ಯ ದೂರಮಾಡಬೇಕು ಎಂದು ಕರೆ ನೀಡಿದರು.ಒಟ್ಟು ನಾಲ್ಕು ದಿನದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ 4376 ಮಕ್ಕಳು ಮತ್ತು ಗ್ರಾಮೀಣ ಪ್ರದೇಶದಲ್ಲಿ 36785 ಮಕ್ಕಳು ಸೇರಿ  ತಾಲ್ಲೂಕಿನಲ್ಲಿ ಒಟ್ಟು 41161 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದ್ದು, ಕಾರ್ಯಕ್ರಮದ ಮೊದಲ ದಿನವಾದ ಭಾನುವಾರ ಬೂತ್‌ಮಟ್ಟದ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ಒಟ್ಟು ತಾಲ್ಲೂಕಿನಲ್ಲಿ 29782 ಮಕ್ಕಳಿಗೆ ಅಂದರೆ ಶೇ 72.4 ರಷ್ಟು ಲಸಿಕೆ ಹಾಕಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ತಿಳಿಸಿದ್ದಾರೆ.ಫಲಿತಾಂಶ: ಪುರಸಭೆಯ 23 ವಾರ್ಡ್‌ಗಳ ಪೈಕಿ ಭಾನುವಾರ 3222 ಮಕ್ಕಳಿಗೆ ಮತ್ತು ಜಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 5195 ಶೇ 70 ರಷ್ಟು ಮಕ್ಕಳಿಗೆ, ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 3903 ಶೇ 73 ರಷ್ಟು ಮಕ್ಕಳಿಗೆ, ಮಸರಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 4498 ಶೇ 74 ರಷ್ಟು ಮಕ್ಕಳಿಗೆ,

 

ಕೊಪ್ಪರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 3821 ಶೇ 84 ಮಕ್ಕಳಿಗೆ, ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 2791 ಶೇ 83.5 ಮಕ್ಕಳಿಗೆ, ಗಲಗ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 3190 ಶೇ 62 ಮಕ್ಕಳಿಗೆ, ಹಿರೇಬೂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 1745 ಶೇ 81.5 ರಷ್ಟು ಮಕ್ಕಳಿಗೆ ಮತ್ತು ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 1417 ಶೇ 82 ರಷ್ಟು ಮಕ್ಕಳು ಸೇರಿ 29782 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕ ನಾಗೇಂದ್ರಪ್ಪ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ, ರಾಜಕುಮಾರ ಹಿರೇಮಠ, ಔಷಧ ಮೇಲ್ವಿಚಾರಕ ಸುಭಾಸ, ಜೆಡಿಎಸ್ ಮುಖಂಡ ಎಚ್.ಶಿವರಾಜ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry