ಶನಿವಾರ, ಜೂನ್ 19, 2021
27 °C

ಪವನ್‌–ಮೋದಿ ಭೇಟಿ ತಪ್ಪು: ಚಿರಂಜೀವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ (ಪಿಟಿಐ): ಈಚೆಗೆ ಜನಸೇನಾ ಪಕ್ಷ ಸ್ಥಾಪಿಸಿರುವ ನಟ ಪವನ್‌ ಕಲ್ಯಾಣ್‌ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರು­ವುದು ಸರಿಯಲ್ಲ ಎಂದು ಪವನ್‌ ಸಹೋದರ, ಕೇಂದ್ರ ಸಚಿವ ಚಿರಂಜೀವಿ ಹೇಳಿದರು.ಆಂಧ್ರ ಪ್ರದೇಶ ವಿಭಜನೆ ನಂತರ ಸೀಮಾಂಧ್ರದಲ್ಲಿ ಕಾಂಗ್ರೆಸ್‌ ಉತ್ತಮ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ಚಿರಂಜೀವಿ ಒಪ್ಪಿಕೊಂಡರು.‘ಗೋಧ್ರಾ ಗಲಭೆಗಳಿಗೆ ಸಂಬಂಧಿಸಿ ಕ್ಷಮೆ ಕೇಳದ ಮೋದಿ ಅವರನ್ನು ಪವನ್‌ ಕಲ್ಯಾಣ್‌ ಭೇಟಿ ಮಾಡಿರುವುದು ತಪ್ಪು’ ಎಂದರು. ಶುಕ್ರವಾರ ಪವನ್‌ ಕಲ್ಯಾಣ್ ಅವರು ಗಾಂಧಿನಗರದಲ್ಲಿ ಮೋದಿ ಅವರನ್ನು ಭೇಟಿಯಾಗಿ ಬೆಂಬಲ ಸೂಚಿ­ಸಿ­ದ್ದರು. ಆಂಧ್ರಪ್ರದೇಶದಲ್ಲಿ ಜನ­ಸೇನಾ ಮತ್ತು ಬಿಜೆಪಿ ಮೈತ್ರಿ ಸಾಧ್ಯತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.