ಪವರ್ ಲಿಫ್ಟಿಂಗ್: ಆನಂದ್ ಭಾರತದ ಬಲಿಷ್ಠ ವ್ಯಕ್ತಿ

7

ಪವರ್ ಲಿಫ್ಟಿಂಗ್: ಆನಂದ್ ಭಾರತದ ಬಲಿಷ್ಠ ವ್ಯಕ್ತಿ

Published:
Updated:

ದಾವಣಗೆರೆ: ನಗರದ ಬೀರಲಿಂಗೇಶ್ವರ ವ್ಯಾಯಾಮ ಶಾಲೆಯ ಕ್ರೀಡಾಪಟು ಎನ್. ಆನಂದ್ ಭಾರತೀಯ ಪವರ್ ಲಿಫ್ಟಿಂಗ್ ಒಕ್ಕೂಟದ ವತಿಯಿಂದ ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ಅ. 13ರಿಂದ 16ರವರೆಗೆ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ `ಭಾರತದ ಬಲಿಷ್ಠ ವ್ಯಕ್ತಿ~ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ದೆಹಲಿ, ರಾಜಸ್ಥಾನ, ಬಿಹಾರ ರಾಜ್ಯಗಳ ತೀವ್ರ ಪೈಪೋಟಿ ನಡುವೆಯೂ ಅತ್ಯುತ್ತಮ ಪ್ರದರ್ಶನ ತೋರಿ, ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ ಎಂದು ದಾವಣಗೆರೆ ಜಿಲ್ಲೆ ಪವರ್ ಲಿಫ್ಟಿಂಗ್ ಸಂಸ್ಥೆ ಗೌರವ ಕಾರ್ಯದರ್ಶಿ ಕೆ. ಗಂಗಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.2010-11ನೇ ಸಾಲಿನಲ್ಲಿ ತೋರಿದ ಅತ್ಯುತ್ತಮ ಸಾಧನೆ ಫಲವಾಗಿ ಜಪಾನಿನ (ಕೊಬೊಸಿಟಿ) ಯಲ್ಲಿ ಡಿ. 5ರಿಂದ 9ರವರೆಗೆ ನಡೆಯುವ ಏಷ್ಯನ್ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ತರಬೇತುದಾರ ಕೆ. ಕುಮಾರ್, ಬಿಎಸ್‌ಎನ್‌ಎಲ್ ನೌಕರ ಎಸ್. ಮೋಹನ್ ಕುಮಾರ್, ಕ್ರೀಡಾಪಟು ಎನ್. ಆನಂದ್ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry