ಪಶುಪತಿನಾಥ ದೇಗುಲದ ಪ್ರಧಾನ ಅರ್ಚಕ ರಾಜೀನಾಮೆ

7

ಪಶುಪತಿನಾಥ ದೇಗುಲದ ಪ್ರಧಾನ ಅರ್ಚಕ ರಾಜೀನಾಮೆ

Published:
Updated:

ಕಠ್ಮಂಡು (ಪಿಟಿಐ): ಕುಂದಾಪುರದ ಮಹಾಬಲೇಶ್ವರ ಭಟ್ಟ ಅವರು ನೇಪಾಳ ಪಶುಪತಿನಾಥ ದೇಗುಲದ ಪ್ರಧಾನ ಅರ್ಚಕ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.‘ಈಗಿರುವ ನಾಲ್ವರು ಅರ್ಚಕರಲ್ಲಿ ಒಬ್ಬರನ್ನು ಪ್ರಧಾನ ಅರ್ಚಕರನ್ನಾಗಿ ನೇಮಿಸಲಾಗುತ್ತದೆ’ ಎಂದು ಆಡಳಿತ ಮಂಡಳಿ ತಿಳಿಸಿದೆ. ಇವರಲ್ಲಿ ಇಬ್ಬರು  ಗೋಕರ್ಣದ  ಅರ್ಚಕರು.‘ವಯೋವೃದ್ಧರಾದ ಪೋಷಕರನ್ನು ನೋಡಿಕೊಳ್ಳಬೇಕಾಗಿದೆ. ಹಾಗಾಗಿ ನಾನು ಭಾರತಕ್ಕೆ ಹೋಗಬೇಕಿದೆ. ಈಗಾ ಗಲೇ ನಾನು 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ’ ಎಂದು ಭಟ್ಟ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry