ಪಶುಪಾಲನಾ ಇಲಾಖೆಯ ಕಾರ್ಯವೈಖರಿ...

7

ಪಶುಪಾಲನಾ ಇಲಾಖೆಯ ಕಾರ್ಯವೈಖರಿ...

Published:
Updated:

ಪಶುಪಾಲನೆ ಇಲಾಖೆಯಲ್ಲಿ ಪಶುವೈದ್ಯರ ಕೊರತೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ನಿವೃತ್ತ ಪಶುವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಈ ವರ್ಷದ ಜನವರಿಯಲ್ಲಿ ಮರು ನೇಮಕ ಮಾಡಿಕೊಂಡ ಸರ್ಕಾರದ ಕ್ರಮ ಸ್ವಾಗತಾರ್ಹ.ಇದರ ಆದೇಶದಂತೆ ನನಗೆ ಜನವರಿಯಲ್ಲಿ ದಾವಣಗೆರೆ­ಯ ಒಂದು ಸ್ಥಳಕ್ಕೆ ನೇಮಕಾತಿ ಆದೇಶ ನೀಡಲಾಗಿತ್ತು. ಆದರೆ 4 ತಿಂಗಳು ಕಳೆದ ನಂತರ ಆ ಜಾಗಕ್ಕೆ ಕಾಯಂ ಪಶು­ವೈದ್ಯ­ರೊಬ್ಬ­ರನ್ನು ವರ್ಗಾವಣೆ ಮಾಡಲಾಯಿತು. ನನ್ನನ್ನು ಕೋರಿಕೆ­ಯ ಮೇರೆಗೆ ಬೇರೆ ಸ್ಥಳಕ್ಕೆ ನಿಯುಕ್ತಗೊಳಿಸಿದರು. ನಂತರ 3 ತಿಂಗಳಾಗುವಷ್ಟರಲ್ಲಿ ಎರಡನೆಯ ಸ್ಥಳಕ್ಕೆ ಮತ್ತೊಬ್ಬ ಪಶು­ವೈದ್ಯರನ್ನು ವರ್ಗಾವಣೆ ಮಾಡಿ, ನನ್ನನ್ನು ಆ ಸ್ಥಳದಿಂದ ಪದವಿ­ಮುಕ್ತಗೊಳಿಸಲಾಗಿದೆ. ಆದರೆ ನನಗೆ ಯಾವುದೇ ಬದಲಿ ಸ್ಥಳವನ್ನು ಸೂಚಿಸಿ­ರುವುದಿಲ್ಲ. ಈಗ ನಾನು ಸ್ಥಳ ನಿಯುಕ್ತಿ­ಗಾಗಿ ಬೆಂಗಳೂರಿನ ಆಯುಕ್ತರ ಕಚೇರಿಗೆ ಪುನಃ ಅಲೆಯಬೇಕು.ನಿವೃತ್ತರನ್ನು ಮರುನೇಮಕ ಮಾಡಿ, 3–4 ತಿಂಗಳಿಗೊಮ್ಮೆ ಸ್ಥಳ ಬದಲಾವಣೆ ಮಾಡುತ್ತ ಕನಿಷ್ಠ ಒಂದು ಸ್ಥಳದಲ್ಲಿ ಪೂರ್ಣ ಅವಧಿಗೆ ಕಾರ್ಯನಿರ್ವಹಿಸಲು ಬಿಡದಿರುವುದು ಎಷ್ಟು ಸಮಂಜಸ? ಈ ರೀತಿ ನಡೆಸಿಕೊಂಡಲ್ಲಿ   ನಿವೃತ್ತಿ ಹೊಂದಿದವರು ಪಶುವೈದ್ಯರಾಗಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಲು ಯಾರು ಮುಂದೆ ಬಂದಾರು?

– ಡಾ. ಜಿ. ಪಿ. ಮೋಹನ್‌, ದಾವಣಗೆರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry