ಪಶುವೈದ್ಯಕೀಯ ಪರೀಕ್ಷಕರ ವೃಂದಕ್ಕೆ ಅನ್ಯಾಯ: ಮನವಿ

7

ಪಶುವೈದ್ಯಕೀಯ ಪರೀಕ್ಷಕರ ವೃಂದಕ್ಕೆ ಅನ್ಯಾಯ: ಮನವಿ

Published:
Updated:
ಪಶುವೈದ್ಯಕೀಯ ಪರೀಕ್ಷಕರ ವೃಂದಕ್ಕೆ ಅನ್ಯಾಯ: ಮನವಿ

ಗುಲ್ಬರ್ಗ: ಇಲಾಖೆಯ ಪುನರ್ ರಚನೆಯಲ್ಲಿ ಪಶುವೈದ್ಯಕೀಯ ಪರೀಕ್ಷಕರ ವೃಂದಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ವೈದ್ಯಕೀಯ ಪರೀಕ್ಷಕರ  ಸಂಘವು ಶುಕ್ರವಾರ ಸಚಿವ ರೇವುನಾಯಕ್ ಬೆಳಮಗಿ ಅವರಿಗೆ ಮನವಿ ಸಲ್ಲಿಸಿದರು.ಪಶುಪಾಲನೆ ಇಲಾಖೆಯ ಪುನರ್ ರಚನೆ ಕುರಿತು ಸರ್ಕಾರ ಹಾಗೂ ಆರ್ಥಿಕ ಇಲಾಖೆ ಪ್ರಸ್ತಾವನೆಯಲ್ಲಿ ವೃಂದದ ಪ್ರಮುಖ ಬೇಡಿಕೆಗಳನ್ನು ಕಡೆಗಣಿಸಿ ಅಂತಿಮ ವರದಿ ಜಾರಿ ಮಾಡಲು ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ತಲುಪಸಿರುವುದು ಸಂಘದ ಗಮನಕ್ಕೆ ಬಂದಿದ್ದು, ವರದಿ ಅನುಷ್ಟಾನಗೊಂಡಲ್ಲಿ ವೃಂದ ನೌಕರರಿಗೆ ತೀವ್ರವಾದ ಅನ್ಯಾಯವಾಗಲಿದೆ ಎಂದು ಸಂಘವು ಮನವಿಯಲ್ಲಿ ತಿಳಿಸಿದೆ.ಸರ್ಕಾರ  ಪಶುವೈದ್ಯಕೀಯ ಪರೀಕ್ಷಕರ ವೃಂದಕ್ಕೆ ಅನ್ಯಾಯ ಮಾಡಿದಲ್ಲಿ ಅ. 3ರಿಂದ ಅನಿರ್ದಿಷ್ಟಾವಧಿಯವರೆಗೆ ಕರ್ತವ್ಯ ನಿರ್ವಹಿಸದೆ ತೀವ್ರವಾದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿಪ್ರಭುರಾವ ಕಲಶೆಟ್ಟಿ ಹಾಗೂ ಅಧ್ಯಕ್ಷ ನಿಜಲಿಂಗಪ್ಪ ಕೊರಳ್ಳಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry