ಪಶುಸಂಗೋಪನಾ ಇಲಾಖೆ ಕಾರ್ಯಾಗಾರ ಯಶಸ್ವಿ

7

ಪಶುಸಂಗೋಪನಾ ಇಲಾಖೆ ಕಾರ್ಯಾಗಾರ ಯಶಸ್ವಿ

Published:
Updated:
ಪಶುಸಂಗೋಪನಾ ಇಲಾಖೆ ಕಾರ್ಯಾಗಾರ ಯಶಸ್ವಿ

ಯಾದಗಿರಿ: ಜಿಲ್ಲೆಯ ಪಶುಸಂಗೋಪನಾ ಮತ್ತು ಪಶುವೈದ್ಯ ಸೇವೆ ಇಲಾಖೆಯಲ್ಲಿ ಇತ್ತೀಚಿಗೆ ಇಲಾಖೆಯ ಸಿಬ್ಬಂದಿಗೆ ಅರೆ ತಾಂತ್ರಿಕ ಕಾರ್ಯಾಗಾರವನ್ನು ಎರ್ಪಡಿಸಿದ್ದು, ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.

ಡಾ.ಎಂ.ಟಿ ಮಂಜುನಾಥ ಅವರು ಮಾತನಾಡಿ, `ಪ್ರಸ್ತುತ ಹಾಲು ಮತ್ತು ಮಾಂಸದ ಉತ್ಪಾದನೆಯು ಜಿಲ್ಲೆಯ ಜನರಿಗೆ ಸಾಕಾಗುವಷ್ಟು ಪ್ರಮಾಣದಲ್ಲಿಲ್ಲ. ಪ್ರತಿ ವ್ಯಕ್ತಿಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸಿನಂತೆ ದಿನಕ್ಕೆ  280 ಗ್ರಾಂ ಹಾಲು ಬೇಕಾಗುತ್ತದೆ.

ಆದರೆ ಜಿಲ್ಲೆಯಲ್ಲಿ ಈ ಪ್ರಮಾಣವು 156 ಗ್ರಾಂ ಇದೆ. ಕಾರಣ 12ನೇ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಜಾನುವಾರು ಉತ್ಪನ್ನಗಳನ್ನು ಹೆಚ್ಚಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು' ಎಂದರು.

ಅದರಂತೆ ವ್ಯಕ್ತಿಯೊಬ್ಬನಿಗೆ ವರ್ಷಕ್ಕೆ 10.95 ಕೆ.ಜಿ ಮಾಂಸ ಲಭ್ಯವಾಗಬೇಕಿದ್ದು, ಜಿಲ್ಲೆಯಲ್ಲಿ ಈ ಪ್ರಮಾಣ ಕಡಿಮೆ ಇದೆ.ಹೊರರಾಜ್ಯಗಳಿಂದ ಕೋಳಿ ಮತ್ತು ತತ್ತಿಗಳನ್ನು ತರಿಸಿಕೊಳ್ಳಲಾಗುತ್ತಿದೆ' ಎಂದ ಅವರು,'ರೈತರು ಹೈನೋದ್ಯಮದಲ್ಲಿ ಆಸಕ್ತಿ ತಳೆಯಬೇಕು' ಎಂದರು. ಇಲಾಖೆಯ ಎಲ್ಲ ಹಿರಿಯ ಪಶು ವೈದ್ಯಕೀಯ ಪರಿಕ್ಷಕರು ಮತ್ತು ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸ್ದ್ದಿದರು.

ಡಾ.ಶೊಭಾ ಸಜ್ಜನ, ಡಾ.ದೇವೇಂದ್ರಪ್ಪ ಬಿರಾದಾರ, ಡಾ.ಬಿದರಿ ಪ್ರಸಾದ ದೇಶಪಾಂಡೆ ಅವರು ತಾಂತ್ರಿಕ ವಿಚಾರಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದಿರುವ ಡಾ.ಎಂ.ಟಿ ಮಂಜುನಾಥ ಅವರನ್ನು ಜಿಲ್ಲಾಪಶು ವೈದ್ಯಕೀಯ ಪರೀಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry