ಪಶು ಆಹಾರ ಟನ್‌ಗೆ 2 ಸಾವಿರ ರೂ ದುಬಾರಿ

7

ಪಶು ಆಹಾರ ಟನ್‌ಗೆ 2 ಸಾವಿರ ರೂ ದುಬಾರಿ

Published:
Updated:

ಬೆಂಗಳೂರು: ಪಶು ಆಹಾರ ದರವನ್ನು ಪ್ರತಿ ಟನ್‌ಗೆ 2 ಸಾವಿರ ರೂಪಾಯಿ ಹೆಚ್ಚಿಸಲು ಕೆಎಂಎಫ್ ನಿರ್ಧರಿಸಿದೆ. ಶನಿವಾರ ನಡೆದ ಕೆಎಂಎಫ್‌ನ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಇದೇ 20ರಿಂದ ದರ ಏರಿಕೆ ಜಾರಿಗೆ ಬರಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಹರ್ಷ ಗುಪ್ತ `ಪ್ರಜಾವಾಣಿ'ಗೆ ತಿಳಿಸಿದರು.ಪಶು ಆಹಾರದ ಉತ್ಪಾದನಾ ವೆಚ್ಚ ಜಾಸ್ತಿಯಾಗಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ಟನ್‌ಗೆ 3,500 ರೂಪಾಯಿ ದರ ಹೆಚ್ಚಿಸಬೇಕು ಎಂಬ ಪ್ರಸ್ತಾವ ಇತ್ತು. ರೈತರಿಗೆ ಹೊರೆಯಾಗಬಾರದು ಎಂಬ ಉದ್ದೇಶದಿಂದ 2,000 ರೂಪಾಯಿ ಹೆಚ್ಚಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಹೇಳಿದರು.ಸದ್ಯ ಪ್ರತಿ ಟನ್ ಪಶು ಆಹಾರದ ದರ 12,300 ರೂಪಾಯಿ. ಇದೇ 20ರಿಂದ 14,300 ರೂಪಾಯಿ ಆಗಲಿದೆ. ದರ ಹೆಚ್ಚಳದ ನಂತರವೂ ಖಾಸಗಿ ಸಂಸ್ಥೆಗಳು ಮಾರಾಟ ಮಾಡುವುದಕ್ಕಿಂತ ಕಡಿಮೆ ದರದಲ್ಲೇ ಕೆಎಂಎಫ್‌ನ ಪಶು ಆಹಾರ ದೊರೆಯಲಿದೆ. ಗುಣಮಟ್ಟವೂ ಉತ್ತಮವಾಗಿದೆ ಎಂದು ತಿಳಿಸಿದರು.ಮಂಡಳಿಯ ಹಿಂದಿನ ನಿರ್ದೇಶಕರಾದ ರಾಮಲಿಂಗೇಗೌಡ, ವೆಂಕಟರಾಂ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಒಂದು ತಿಂಗಳಲ್ಲಿ ಅವರ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry