ಪಶು ಆಹಾರ ಬೆಲೆ 2 ಸಾವಿರ ದುಬಾರಿ

7

ಪಶು ಆಹಾರ ಬೆಲೆ 2 ಸಾವಿರ ದುಬಾರಿ

Published:
Updated:

ಬೆಂಗಳೂರು: ಪಶು ಆಹಾರದ ಬೆಲೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರತಿ ಟನ್‌ಗೆ ಎರಡು ಸಾವಿರ ರೂಪಾಯಿ ಹೆಚ್ಚಿಸಲಾಗಿದೆ.ಭಾನುವಾರ ನಡೆದ ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಸರ್ವ ಸದಸ್ಯರ ಸಭೆಯಲ್ಲಿ ಬೆಲೆ ಏರಿಕೆಯ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಟನ್‌ಗೆ 10,300 ರೂಪಾಯಿ ಬೆಲೆಯನ್ನು 12,300 ರೂಪಾಯಿಗೆ ಏರಿಸಲಾಗಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.ಒಂದು ಟನ್‌ಗೆ 4,500 ರೂಪಾಯಿ ನಷ್ಟವಾಗುತ್ತಿದೆ. ತಿಂಗಳಿಗೆ 10 ಕೋಟಿ ರೂಪಾಯಿಯಂತೆ ಜೂನ್‌ನಿಂದ ಇಲ್ಲಿಯವರೆಗೆ 30 ಕೋಟಿ ರೂಪಾಯಿ ನಷ್ಟವಾಗಿದೆ. ಇದನ್ನು ಸರಿದೂಗಿಸುವ ದೃಷ್ಟಿಯಿಂದ 2 ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದೆ. ಇಷ್ಟಾದರೂ ರೂ 2,500 ಕೋಟಿ  ನಷ್ಟವಾಗಲಿದೆ ಎನ್ನಲಾಗಿದೆ.ಉಪಾಧ್ಯಕ್ಷರ ನೇಮಕ: ಕೆಎಂಎಫ್ ವಾರ್ಷಿಕ 6 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಆದರೆ ಕಾಯಂ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಇಲ್ಲದೆ ಇರುವುದರಿಂದ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.ಇದರಿಂದಾಗಿ ಉಪಾಧ್ಯಕ್ಷರ ಹುದ್ದೆ ಸೃಷ್ಟಿಸುವ ಬಗ್ಗೆ ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆಯಾಗಿದೆ.  ಉಪ ನಿಯಮಗಳಿಗೆ ತಿದ್ದುಪಡಿ ತರಬೇಕಾದ ಕಾರಣ  ವಿಶೇಷ ಸಭೆ ಕರೆಯುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry