ಪಶು ವೈದ್ಯಕೀಯ ಪರೀಕ್ಷಕರಿಂದ ಪ್ರತಿಭಟನೆ

7

ಪಶು ವೈದ್ಯಕೀಯ ಪರೀಕ್ಷಕರಿಂದ ಪ್ರತಿಭಟನೆ

Published:
Updated:

ಬಾಗಲಕೋಟೆ: ಪಶುಪಾಲನೆ ಇಲಾಖೆಯ ಪುನರ್ ರಚನೆಯಲ್ಲಿ ಪಶುವೈದ್ಯಕೀಯ ಪರೀಕ್ಷಕರ ವೃಂದದವರಿಗೆ ಅನ್ಯಾಯವಾಗುತ್ತಿರುವುದನ್ನು ಸರಿಪಡಿಸದಿದ್ದರೇ ಇದೇ 3ರಿಂದ ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.



ಬಾಗಲಕೋಟೆ ಜಿಲ್ಲಾ ಪಶು ವೈದ್ಯಕೀಯ ಪರೀಕ್ಷಕರ ಸಂಘ ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಅವರಿಗೆ ಮನವಿ ಸಲ್ಲಿಸಿ, ಪಶು ವೈದ್ಯಕೀಯ ಪರೀಕ್ಷಕರ ಬೇಡಿಕೆಗಳ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.



ಪಶುವೈದ್ಯಕೀಯ ಪರೀಕ್ಷಕರ ನೇಮಕಾತಿಗೆ ಇರುವ ವಿದ್ಯಾರ್ಹತೆ ಪಿಯುಸಿ ವಿಜ್ಞಾನದ ನಂತರದ 2 ವರ್ಷಗಳ ಇಲಾಖಾವತಿಯಿಂದ ನೀಡುವ ತಾಂತ್ರಿಕ ತರಬೇತಿಯ ಬದಲು ಪಿಯುಸಿ ವಿಜ್ಞಾನದ ನಂತರ 2 ವರ್ಷಗಳ ಪಶುವೈದ್ಯಕೀಯ ಡಿಪ್ಲೊಮಾ ವಿದ್ಯಾರ್ಹತೆ ನಿಗದಿಪಡಿಸಬೇಕು.



ಹೋಬಳಿ ಮಟ್ಟದಲ್ಲಿರುವ ವಿವಿಧ ಪಶುವೈದ್ಯಕೀಯ ಸಂಸ್ಥೆಗಳನ್ನು ಪಶು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಏಕ ರೂಪದ ಸಿಬ್ಬಂದಿ ವರ್ಗವನ್ನು ಹೊಂದುವಂತೆ ರಾಜ್ಯದ ಎಲ್ಲ ಪಶು ಆಸ್ಪತ್ರೆಗಳಲ್ಲಿ ಜಾನುವಾರು ಅಧಿಕಾರಿ ಹುದ್ದೆಗಳನ್ನು ನೇಮಿಸಬೇಕು.



ಪಶು ವೈದ್ಯಕೀಯ ಪರೀಕ್ಷಕರ ವೃಂದದ ನೌಕರರಿಗೆ ತಮ್ಮ ಸೇವಾ ಅವಧಿಯಲ್ಲಿ ಕೇವಲ ಎರಡೇ ಮುಂಬಡ್ತಿ ಅವಕಾಶವಿದ್ದು, 3ನೇ ಮುಂಬಡ್ತಿಗೆ ಅವಕಾಶ ಕಲ್ಪಿಸುವುದಕ್ಕಾಗಿ ತಾಲ್ಲೂಕಿಗೆ ಒಂದರಂತೆ 176, ಜಿಲ್ಲೆಗೆ ಒಂದರಂತೆ ತೆರೆಯಲು ಉದ್ದೇಶಿಸಿರುವ ಪಾಲಿ ಕ್ಲಿನಿಕ್‌ಗಳಲ್ಲಿ 30 ಹಾಗೂ ಕ್ಷೇತ್ರಗಳಲ್ಲಿ 33 ಸೇರಿದಂತೆ ಒಟ್ಟು 239 `ಬಿ~ ಗುಂಪಿನ ಜಾನುವಾರು ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಸೃಷ್ಟಿಸಬೇಕು.



ವೇತನ ಶ್ರೇಣಿ ಹೆಚ್ಚಿಸಬೇಕು, ಗ್ರಾಮೀಣ ಭತ್ಯೆ, ಕ್ಷೇತ್ರ ಭತ್ಯೆ, ವಿಶೇಷ ಭತ್ಯೆ, ಪ್ರವಾಸ ಭತ್ಯೆಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.



ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಆರ್. ವಾಸನದ, ಉಪಾಧ್ಯಕ್ಷ ಎ.ಎಚ್. ಹೊನವಾಡ, ಪ್ರಧಾನ ಕಾರ್ಯದರ್ಶಿ ಡಿ.ಎಂ. ಬೆಣ್ಣೂರ, ಖಜಾಂಚಿ ಡಿ.ಎಫ್. ತಳವಾರ, ಜಂಟಿ ಕಾರ್ಯದರ್ಶಿ ಆರ್.ಎಂ. ಕುಲಕರ್ಣಿ,  ಎಸ್.ಬಿ. ದಾಸರ, ಎಸ್.ಎಚ್. ದಳವಾಯಿ, ಎಸ್.ಆರ್. ಕೊಳಚಿ, ಎ.ಜಿ. ಕೋಳೂರ, ಎಸ್.ಸಿ. ಲುಕ್, ಎ.ಎಚ್. ಕರಿಕಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry