ಪಶ್ಚಿಮಬಂಗಾಳ: ಎರಡೇ ದಿನದಲ್ಲಿ 19 ಶಿಶು ಸಾವು

7

ಪಶ್ಚಿಮಬಂಗಾಳ: ಎರಡೇ ದಿನದಲ್ಲಿ 19 ಶಿಶು ಸಾವು

Published:
Updated:

ಮಾಲ್ಡಾ/ಬಂಕುರಾ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಶಿಶು ಮರಣ ಪ್ರಮಾಣ ಹೆಚ್ಚುತ್ತಿದ್ದು, ಕಳೆದ ಎರಡು ದಿನಗಳಲ್ಲಿ ಮಾಲ್ಡಾ, ಬಂಕುರಾ ಜಿಲ್ಲೆಗಳಲ್ಲಿ 19 ಶಿಶುಗಳು ಸಾವನ್ನಪ್ಪಿವೆ.ಬಂಕುರಾದ ಸಮ್ಮಿಳನಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 10 ಶಿಶು ಮತ್ತು 9 ಶಿಶು ಮಾಲ್ಡಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಮ್ಮಿಳನಿ ಕಾಲೇಜಿನ ಮೇಲ್ವಿಚಾರಕ ಡಾ. ಪಿ.ಖಂಡು, ಮಿದುಳು ಪೊರೆ ಊತ, ನ್ಯುಮೋನಿಯಾ ಮತ್ತು ಕಡಿಮೆ ತೂಕದಿಂದ ಶಿಶುಗಳು ಸತ್ತಿವೆ ಎಂದಿದ್ದಾರೆ.ಹೆಚ್ಚಿನ ನವಜಾತ ಶಿಶುಗಳು ಹಳ್ಳಿಗಳಿಂದ ಬಂದವಾಗಿದ್ದು ನ್ಯುಮೋನಿಯಾ ಹಾಗೂ ಸೆಪ್ಟಿಸೆಮಿಯಾದಿಂದ ಬಳಲುತ್ತಿವೆ. 9 ಶಿಶುಗಳು ಸಾಯುವ ಮೂಲಕ 16 ದಿನಗಳಲ್ಲಿ ಒಟ್ಟು 125 ಶಿಶು ಮರಣ ಉಂಟಾಗಿದೆ.ನವಜಾತ ರಕ್ಷಣಾ ಕೇಂದ್ರದ ತಜ್ಞರು ಸದ್ಯದಲ್ಲೇ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ಮಾಲ್ಡಾ ಆಸ್ಪತ್ರೆಯ ಡಾ. ಎಂ. ಎ ರಶೀದ್ ತಿಳಿಸಿದ್ದಾರೆ.ಸರ್ಕಾರಿ ಸೌಲಭ್ಯ ಇರುವಲ್ಲಿ ಶಿಶು ಮರಣ ಹೆಚ್ಚುತ್ತಿರುವುದಕ್ಕೆ ಅಪೌಷ್ಟಿಕತೆ ಕಾರಣ ಎಂಬ ವಾದವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೆರಿಗೆ ಸಂದರ್ಭ ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲೇ ಶಿಶು ಜನಿಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry