ಪಶ್ಚಿಮ ಬಂಗಾಳದಲ್ಲಿ ಏಟಿಗೆ ಎದಿರೇಟು;ಟಿಎಂಸಿ- ಕಾಂಗ್ರೆಸ್ ಒಡಕು

ಗುರುವಾರ , ಜೂಲೈ 18, 2019
28 °C

ಪಶ್ಚಿಮ ಬಂಗಾಳದಲ್ಲಿ ಏಟಿಗೆ ಎದಿರೇಟು;ಟಿಎಂಸಿ- ಕಾಂಗ್ರೆಸ್ ಒಡಕು

Published:
Updated:

ಕೋಲ್ಕತ್ತ (ಪಿಟಿಐ): ರಾಜ್ಯದಲ್ಲಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯೇ ಹೋರಾಡಲಿದೆ ಎಂಬ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದನ್ನು ಕಾಂಗ್ರೆಸ್ ಕೂಡ ಸವಾಲಾಗಿ ಸ್ವೀಕರಿಸಿದೆ. ಇದರಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿ ಒಡಕು ಕಾಣಿಸಿಕೊಂಡಿದೆ.`ನಾವು ಯಾರೊಬ್ಬರ  ದಯೆಯಲ್ಲೂ ಇರಲು ಬಯಸುವುದಿಲ್ಲ. ನಮ್ಮನ್ನು ಎಲ್ಲಿಯವರೆಗೆ ಗೌರವದಿಂದ ಕಾಣಲಾಗುತ್ತದೋ ಅಲ್ಲಿಯವರೆಗೆ ಕೇಂದ್ರದಲ್ಲಿ ನಾವು ಯುಪಿಎ ಭಾಗವಾಗಿಯೇ ಇರುತ್ತೇವೆ. ಆದರೆ, ಪಶ್ಚಿಮ ಬಂಗಾಳದಲ್ಲಿ ನಾವು ಏಕಾಂಗಿಯಾಗಿಯೇ ಹೋರಾಡುತ್ತೇವೆ~ ಎಂದು ಮಮತಾ ಬ್ಯಾನರ್ಜಿ ಅವರು ಪಕ್ಷದ ವತಿಯಿಂದ ಶನಿವಾರ ಆಯೋಜಿಸಿದ್ದ `ವಾರ್ಷಿಕ ಹುತಾತ್ಮರ ದಿನ~ದ ರ‌್ಯಾಲಿಯಲ್ಲಿ ಹೇಳಿದ್ದಾರೆ.ಮಮತಾ ಬ್ಯಾನರ್ಜಿ ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ), ಟಿಎಂಸಿ ಮುಖ್ಯಸ್ಥರ ಸವಾಲನ್ನು ಸ್ವೀಕರಿಸುವುದಾಗಿ ತಿಳಿಸಿದೆ.`ನಮಗೆ ಇದು ನಗಣ್ಯ ವಿಷಯ. ಅವರು (ಮಮತಾ) ರಾಜ್ಯದಲ್ಲಿ ಏಕಾಂಗಿಯಾಗಿಯೇ ಹೋಗುವ ನಿರ್ಣಯ ಮಾಡಿದ್ದಾರೆ. ಹಾಗೆಯೇ ಮಾಡಲಿ. ನಮಗೂ ಏಕಾಂಗಿಯಾಗಿ ಚುನಾವಣೆ ಎದುರಿಸುವ ಸಾಮರ್ಥ್ಯ ಇದೆ~ ಎಂದು ಪಿಸಿಸಿ ಅಧ್ಯಕ್ಷ ಪ್ರದೀಪ್ ಭಟ್ಟಾಚಾರ್ಯ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry