ಭಾನುವಾರ, ಮೇ 9, 2021
26 °C

ಪಹಣಿ ವಿತರಣೆ ವಿಳಂಬ: ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಹಣಿ ವಿತರಣೆ ವಿಳಂಬ: ರೈತರ ಪ್ರತಿಭಟನೆ

ಹರಿಹರ: ತಾಲ್ಲೂಕು ಕಚೇರಿ ಆವರಣದಲ್ಲಿರುವ ಪಹಣಿ ವಿತರಣೆ ಕೇಂದ್ರದಿಂದ ಪಹಣಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಶೀಘ್ರವಾಗಿ ಪಹಣಿ ವಿತರಿಸಲು ವ್ಯವಸ್ಥೆ ಮಾಡಿ ಎಂದು ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಹಶೀಲ್ದಾರ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ರೈತ ಮುಖಂಡ ಹಾಳೂರು ನಾಗರಾಜ ಮಾತನಾಡಿ, ಪಹಣಿ ಪಡೆಯಲು ಬರುವ ರೈತರು ವಾರಗಟ್ಟಲೆ ಕಚೇರಿಗೆ ಅಲೆದಾಡುತ್ತಿದ್ದಾರೆ.ಮಳೆಗಾಲ ಆರಂಭವಾಗಿದ್ದು ಬೀಜ, ಗೊಬ್ಬರ ಹಾಗೂ ಬೆಳೆಸಾಲ ಪಡೆಯಲು ಪಹಣಿ ಅವಶ್ಯವಾಗಿದೆ. ಇದರಿಂದ ರೈತರಿಗೆ ಅನವಶ್ಯಕ ತೊಂದರೆ ಆಗುತ್ತಿದೆ. ಪಹಣಿ ವಿತರಣೆ ಕೇಂದ್ರದಲ್ಲಿರುವ ಸಿಬ್ಬಂದಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿಸಿದರು.ನಮ್ಮ ಸಮಸ್ಯೆಗೆ ಸರಿಯಾಗಿ ಸ್ಪಂದಿಸಿ ಕೂಡಲೇ ಸಿಬ್ಬಂದಿ ಬದಲಾವಣೆ ಮಾಡಬೇಕು ಎಂದು ರೈತರು ತಹಶೀಲ್ದಾರ್ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ರೈತ ಮುಂಖಂಡರಾದ ಎಚ್. ಓಂಕಾರಪ್ಪ, ಪ್ರಭುಗೌಡ, ಕೆ.ವಿ, ರುದ್ರಮುನಿ, ಕೆಂಚನಹಳ್ಳಿ ಶೇಖರಪ್ಪ, ನಾರಪ್ಪ, ಪ್ರಕಾಶ, ವಿರೂಪಾಕ್ಷಪ್ಪ, ಸಂತೋಷಕುಮಾರ್, ರುದ್ರಪ್ಪ, ಶಿವಕುಮಾರ್ ಹಾಜರಿದ್ದರು.ಸಮಸ್ಯೆ ಬಗೆಹರಿಸಲಾಗುವುದು

4-5 ದಿನಗಳಿಂದ ಮಲೇಬೇನ್ನೂರಿನ ಪಹಣಿ ವಿತರಣಾ ಕೇಂದ್ರ ಸ್ಥಗಿತಗೊಂಡಿದೆ ಆದ್ದರಿಂದ ಪಹಣಿ ಪಡೆಯುವ ರೈತರ ಸಂಖ್ಯೆ ಹೆಚ್ಚಾಗಿದೆ.ಪಹಣಿ ವಿತರಣೆ ವಿಳಂಬಕ್ಕೆ ಸಿಬ್ಬಂದಿ ಕಾರಣವಲ್ಲ. ಪಹಣಿ ವಿಳಂಬದ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಿದ್ದೇನೆ. ಕೆಲವೇ ದಿನಗಳಲ್ಲಿ ಅಗತ್ಯವಾದ ಬದಲಾವಣೆ ಮಾಡಲಾಗುವುದು.

-ಜಿ.ನಜ್ಮಾ, ತಹಶೀಲ್ದಾರ್, ಹರಿಹರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.