ಪಾಂಡವಪುರ: ಲೋಕಾಯುಕ್ತ ಬಲೆಗೆ ಪಿಡಿಓ

7

ಪಾಂಡವಪುರ: ಲೋಕಾಯುಕ್ತ ಬಲೆಗೆ ಪಿಡಿಓ

Published:
Updated:

ಪಾಂಡವಪುರ: ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಗುರುವಾರ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ.ತಾಲ್ಲೂಕಿನ ಡಿಂಕಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಕೃಷ್ಣಚಾರ್ ವಳಲೆಕಟ್ಟೆಕೊಪ್ಪಲಿನ ಗ್ರಾ.ಪಂ.  ಮಾಜಿ ಸದಸ್ಯ ಜವರೇ ಗೌಡರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ಪಿ ಬಸವ ರಾಜು ಮತ್ತು ಸಬ್‌ಇನ್ಸ್‌ಪೆಕ್ಟರ್ ರಾಜು ಅವರ ಕೈಗೆ ಸಿಕ್ಕಿಬಿದ್ದಾರೆ.ವಳಲೆಕಟ್ಟೆಕೊಪ್ಪಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಗುತ್ತಿಗೆ ನೀಡಲು ಕೃಷ್ಣ ಚಾರ್   ಜವರೇಗೌಡರಿಂದ 5 ಸಾವಿರ ಲಂಚವನ್ನು ಕೇಳಿದ್ದರು.ಶಿಕ್ಷಕ ಅಮಾನತು

ಶ್ರೀರಂಗಪಟ್ಟಣ:
ಕೆಲಸಕ್ಕೆ ಅನಧಿಕೃತ ಗೈರು ಹಾಜರಾಗುತ್ತಿದ್ದ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಬ್ಬನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಲಕ್ಷ್ಮಿಕಾಂತ್ ಎಂಬವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್ ಗುರು ವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಸಬ್ಬನಕುಪ್ಪೆ ಶಾಲೆಯ ಶಿಕ್ಷಕ ಲಕ್ಷ್ಮಿಕಾಂತ್ ಕಳೆದ ಐದಾರು ತಿಂಗಳುಗಳಿಂದ ಶಾಲೆಗೆ ಅನಧಿಕೃತ ವಾಗಿ ಗೈರು ಹಾಜರಾಗುತ್ತಿದ್ದರು. ಈ ಕಾರಣಕ್ಕೆ ಅವರಿಗೆ ಹಲವು ಬಾರಿ ನೊಟೀಸ್ ನೀಡಲಾಗಿತ್ತು. ಆದರೂ ತಮ್ಮ ಕೆಲಸಕ್ಕೆ ಹಾಜರಾಗದೆ ಕರ್ತವ್ಯಲೋಪ ಎಸಗಿದ್ದರು. ಹಾಗಾಗಿ ಲಕ್ಷ್ಮಿಕಾಂತ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry