ಸೋಮವಾರ, ಜೂನ್ 21, 2021
21 °C

ಪಾಂಡುರಂಗ ಪಾಟೀಲ ಹು-ಧಾ ನೂತನ ಮೇಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಬಿಜೆಪಿಯ ಡಾ. ಪಾಂಡುರಂಗ ಪಾಟೀಲ ಮತ್ತು ಉಪ ಮೇಯರ್ ಆಗಿ ಅದೇ ಪಕ್ಷದ ಭಾರತಿ ಪಾಟೀಲ ಶನಿವಾರ ಆಯ್ಕೆಯಾದರು.ಚುನಾವಣಾಧಿಕಾರಿ ಆಗಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತ ಗಂಗಾರಾಮ್ ಬಡೇರಿಯಾ ಚುನಾವಣಾ ಪ್ರಕ್ರಿಯೆ ನಡೆಸಿದ ಬಳಿಕ ಮೇಯರ್-ಉಪ ಮೇಯರ್ ಆಯ್ಕೆಯನ್ನು ಪ್ರಕಟಿಸಿದರು.ಮೇಯರ್ ಸ್ಥಾನಕ್ಕೆ ಪಾಂಡುರಂಗ ಪಾಟೀಲ ಅವರಲ್ಲದೆ ಕಾಂಗ್ರೆಸ್‌ನ ಪ್ರಕಾಶ ಘಾಟಗೆ ಮತ್ತು ಜೆಡಿಎಸ್‌ನ ರಾಜಣ್ಣ ಕೊರವಿ ನಾಮಪತ್ರ ಸಲ್ಲಿಸಿದ್ದರು.

ರಾಜಣ್ಣ ಕೊರವಿ ನಾಮಪತ್ರ ವಾಪಸು ಪಡೆದಿದ್ದರಿಂದ ಡಾ. ಪಾಟೀಲ ಮತ್ತು ಘಾಟಗೆ ಮಧ್ಯೆ ನೇರ ಸ್ಪರ್ಧೆ ನಡೆಯಿತು. ಡಾ. ಪಾಟೀಲ ಪರವಾಗಿ 41 ಮತಗಳು ಬಂದರೆ, ಘಾಟಗೆ 21 ಮತಗಳನ್ನಷ್ಟೇ ಗಳಿಸಿದರು. ಜೆಡಿಎಸ್‌ನ ಐವರು ತಟಸ್ಥರಾಗಿ ಉಳಿದರು.ಈ ಮಧ್ಯೆ ಚುನಾವಣಾಧಿಕಾರಿ, ಪತ್ರಕರ್ತರ ಉಪಸ್ಥಿತಿ ಕುರಿತು ಆಕ್ಷೇಪ ಎತ್ತಿದ್ದರಿಂದ ಮಾಧ್ಯಮ ಪ್ರತಿನಿಧಿಗಳೆಲ್ಲ ಸಭಾಭವನದಿಂದ ಹೊರ ನಡೆದರು. ಮಾಧ್ಯಮ ಪ್ರತಿನಿಧಿಗಳನ್ನು ಹೊರ ಹಾಕಿದ್ದನ್ನು ವಿರೋಧಿಸಿ  ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.ಪ್ರತಿಪಕ್ಷ ಸದಸ್ಯರ ಸಭಾತ್ಯಾಗದ ನಡುವೆಯೇ ಉಪ ಮೇಯರ್ ಚುನಾವಣಾ ಪ್ರಕ್ರಿಯೆ ನಡೆಯಿತು. ಭಾರತಿ ಪಾಟೀಲ ಪರವಾಗಿ 41 ಮತಗಳು ಬಂದರೆ, ಪೂಜಾ ಶೂನ್ಯ ಮತ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.