ಪಾಂಡೆಗೆ ನಾಲ್ಕು ಪಂದ್ಯಗಳ ನಿಷೇಧ

7

ಪಾಂಡೆಗೆ ನಾಲ್ಕು ಪಂದ್ಯಗಳ ನಿಷೇಧ

Published:
Updated:

ಮುಂಬೈ (ಪಿಟಿಐ): ಆಟಗಾರರ ಒಪ್ಪಂದದ ನಿಯಮವನ್ನು ಉಲ್ಲಂಘಿಸಿರುವ ಕರ್ನಾಟಕದ ಯುವ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅವರ ಮೇಲೆ ಕೋಲ್ಕತ್ತ ನೈಟ್ ರೈಡರ್ಸ್ ನಾಲ್ಕು ಪಂದ್ಯಗಳ ನಿಷೇಧ ಹೇರಿದೆ.ಆದ್ದರಿಂದ ಪಾಂಡೆ ಅವರು ಏಪ್ರಿಲ್ 8ರಂದು ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಾಲ್ಕನೇ ಅವತರಣಿಕೆಯ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡುವಂತಿಲ್ಲ ಎಂದು ಐಪಿಎಲ್ ಆಡಳಿತ ಮಂಡ ಳಿಯು ಶುಕ್ರವಾರ ಇಲ್ಲಿ ಪ್ರಕಟಿಸಿದೆ.ನಿಯಮ ಉಲ್ಲಂಘಿಸಿದ್ದಕ್ಕಾಗಿ ನಿಷೇಧಕ್ಕೊಳಗಾಗಿರುವ ಮನೀಷ್ ಹೊಸ ಫ್ರಾಂಚೈಸಿಯಾದ ಪುಣೆ ವಾರೀಯರ್ಸ್ ತಂಡವು ಆಡುವ ಆರಂಭದ ಪಂದ್ಯಗಳಲ್ಲಿಯೇ ಕ್ಷೇತ್ರದಿಂದ ಹೊರಗೆ ಉಳಿಯಬೇಕಾದಂಥ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry