ಪಾಕಿಸ್ತಾನಕ್ಕೆ ಸರಣಿ ಜಯ

7

ಪಾಕಿಸ್ತಾನಕ್ಕೆ ಸರಣಿ ಜಯ

Published:
Updated:

ಆಕ್ಲೆಂಡ್ (ಐಎಎನ್‌ಎಸ್):  ಆಕ್ರಮ ಣಕಾರಿ ಆಟವಾಡಿದ ಜೆಸ್ಸಿ ರೈಡರ್ (107; 142 ನಿ., 93 ಎ., 7 ಬೌಂಡರಿ, 6 ಸಿಕ್ಸರ್) ಅವರ ಬ್ಯಾಟಿಂಗ್ ಬಲದಿಂದಾಗಿ ನ್ಯೂಜಿ ಲೆಂಡ್ ತಂಡದವರು ಕೊನೆಯ ಏಕ ದಿನ ಪಂದ್ಯದಲ್ಲಿ 57 ರನ್‌ಗಳ ಅಂತರದಿಂದ ಪಾಕಿಸ್ತಾನವನ್ನು ಪರಾಭವಗೊಳಿಸಿದರು.ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಗೆದ್ದರೂ ಆತಿಥೇಯರಿಗೆ ಸರಣಿ ಸೋಲಿನ ನಿರಾಸೆ ಕಾಡಿತು. ರಾಸ್ ಟೇಲರ್ ನಾಯಕತ್ವದ ನ್ಯೂಜಿಲೆಂಡ್ ಸರಣಿಯಲ್ಲಿ ಜಯದೊಂದಿಗೆ ಉತ್ತಮ ಆರಂಭ ಪಡೆದಿತ್ತು. ಆದರೆ ಆನಂತರ ಅದಕ್ಕೆ ನಿರಾಸೆ ಕಾಡಿತು. ಆದ್ದರಿಂದ ಕೊನೆಯ ಪಂದ್ಯದಲ್ಲಿನ ಗೆಲುವು ಪ್ರಯೋಜನಕಾರಿ ಆಗಿದ್ದು ಕೇವಲ ಸರಣಿ ಸೋಲಿನ ಅಂತರ ತಗ್ಗಿಸಲು. ಆರು ಪಂದ್ಯಗಳ ಸರಣಿಯಲ್ಲಿ ಪಾಕ್ 3-2ರಲ್ಲಿ  ವಿಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಕಿವೀಸ್ 196 ಎಸೆತಗಳು ಬಾಕಿ ಇರುವಂತೆಯೇ 9 ವಿಕೆಟ್‌ಗಳಿಂದ ಪಾಕ್ ಎದುರು ಗೆದ್ದಿತ್ತು. ಆನಂತರ ಕ್ವೀನ್ಸ್‌ಟೌನ್ ಇವೆಂಟ್ ಸೆಂಟರ್ ಕ್ರೀಡಾಂಗಣದಲ್ಲಿ ವರುಣನ ಅವಕೃಪೆಯಿಂದ ಪಂದ್ಯ ನಡೆಯಲು ಸಾಧ್ಯವಾಗಿರಲಿಲ್ಲ. ನಂತರದ ಮೂರು ಪಂದ್ಯಗಳಲ್ಲಿ ಪಾಕ್ ಕ್ರಮವಾಗಿ 43 ರನ್ (ಕ್ರೈಸ್ಟ್‌ಚರ್ಚ್), 2 ವಿಕೆಟ್ (ನೇಪಿಯರ್) ಹಾಗೂ 41 ರನ್ (ಹ್ಯಾಮಿಲ್ಟನ್) ಅಂತರದಿಂದ ವಿಜಯ ಸಾಧಿಸಿತ್ತು. ಕೊನೆಯ ಪಂದ್ಯದಲ್ಲಿ ನಿರಾಸೆ ಹೊಂದಿದರೂ ಶಾಹೀದ್ ಆಫ್ರಿದಿ ನಾಯಕತ್ವದ ತಂಡವು ಸರಣಿ ಗೆಲುವಿನ ಸಂಭ್ರಮ ಪಡೆಯಿತು.ಟಾಸ್ ಗೆದ್ದರೂ ಮೊದಲ ಬ್ಯಾಟಿಂಗ್ ಮಾಡಲು ತೀರ್ಮಾನಿಸದ ಪಾಕ್ ತಂಡದ ನಾಯಕ ಶಾಹೀದ್ ಆಫ್ರಿದಿ ಅಲ್ಲಿಯೇ ಎಡವಿದರು. ಬೌಲರ್‌ಗಳು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಬೇಗ ಕಡಿವಾಣ ಹಾಕುವುದು ಸಾಧ್ಯವಾಗಲಿಲ್ಲ. ಆತಿಥೇಯರು ತಮ್ಮ ಪಾಲಿನ 50 ಓವರುಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 311 ರನ್ ಕಲೆಹಾಕಿದರು. ಗೆಲುವಿನ ಗುರಿಯನ್ನು ಬೆನ್ನಟ್ಟಿದ ಪಾಕ್‌ಗೆ ಹ್ಯಾಮಿಷ್ ಬೆನೆಟ್ (46ಕ್ಕೆ4) ಅವರ ಅಪಾಯಕಾರಿಯಾದರು. 44.1 ಓವರುಗಳಲ್ಲಿಯೇ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡ ಪಾಕ್ ಗಳಿಸಿದ್ದು 254 ರನ್ ಮಾತ್ರ.ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 50 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 311 (ಮಾರ್ಟಿನ್ ಗುಪ್ಟಿಲ್ 44, ಬ್ರೆಂಡನ್ ಮೆಕ್ಲಮ್ 12, ಜೆಸ್ಸಿ ರೈಡರ್ 107, ಸ್ಕಾಟ್ ಸ್ಟೈರಿಸ್ ಔಟಾಗದೆ 58, ನಥಾನ್ ಮೆಕ್ಲಮ್ 65; ಮೊಹಮ್ಮದ್ ಹಫೀಜ್ 57ಕ್ಕೆ2, ಅಬ್ದುಲ್ ರಜಾಕ್ 23ಕ್ಕೆ2); ಪಾಕಿಸ್ತಾನ: 44.1 ಓವರುಗಳಲ್ಲಿ 254 (ಮೊಹಮ್ಮದ್ ಹಫೀಜ್ 21, ಕಮ್ರನ್ ಅಕ್ಮಲ್ 89, ಯೂನಿಸ್ ಖಾನ್ 16, ಅಸದ್ ಶಫೀಕ್ 26, ಶಾಹೀದ್ ಆಫ್ರಿದಿ 44, ಸೊಹೇಲ್ ತನ್ವೀರ್ 30; ಹ್ಯಾಮಿಷ್ ಬೆನೆಟ್ 46ಕ್ಕೆ4, ಜೇಮ್ಸ್ ಫ್ರಾಂಕ್ಲಿನ್ 50ಕ್ಕೆ3); ಫಲಿತಾಂಶ: ನ್ಯೂಜಿಲೆಂಡ್‌ಗೆ 57 ರನ್‌ಗಳ ಗೆಲುವು; ಆರು ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನಕ್ಕೆ 3-2ರಲ್ಲಿ ಜಯ; ಪಂದ್ಯ ಶ್ರೇಷ್ಠ: ಜೆಸ್ಸಿ ರೈಡರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry