ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಪಾಕಿಸ್ತಾನದಲ್ಲಿ ಭಾರಿ ಮಳೆ: 60 ಸಾವು

Published:
Updated:

ಕರಾಚಿ (ಪಿಟಿಐ): ಪಾಕಿಸ್ತಾನದ  ಪಂಜಾಬ್ , ಬಲೂಚಿಸ್ತಾನ್ ಹಾಗೂ ಸಿಂಧ್ ಪ್ರಾಂತ್ಯಗಳೂ ಸೇರಿದಂತೆ ಹಲವೆಡೆ ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಮಳೆ ಬೀಳುತ್ತಿರುವುದರಿಂದ ಸುಮಾರು 60 ಜನರು ಮೃತಪಟ್ಟಿದ್ದು, ಸಾವಿರಾರು ಜನರು ನಿರಶ್ರಿತರಾಗಿದ್ದಾರೆ.  ಇದಲ್ಲದೆ ಸಾಕಷ್ಟು ಬೆಳೆ ನಾಶವಾಗಿದೆ.ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮದಿಂದ ಪೂರ್ವ ಬಲೂಚಿಸ್ತಾನ ಸೇರಿದಂತೆ ಸಿಂಧ್,  ದಕ್ಷಿಣ ಪಂಜಾಬ್ ಹಾಗೂ ಕೇಂದ್ರ ಪಂಜಾಬ್‌ನಲ್ಲಿ  ಪ್ರವಾಹ ಕಂಡು ಬಂದಿದೆ ಎನ್ನಲಾಗಿದೆ.ಚಂಡಮಾರುತದಿಮದ ಕೂಡಿದ ಮುಂಗಾರು ಮಳೆಯಿಂದ ಸಿಂಧ್ ಪ್ರಾಂತ್ಯದ ಹಲವು ಹಳ್ಳಿಗಳಲ್ಲಿನ ಅಪಾರ ಸಂಖ್ಯೆಯಲ್ಲಿ ಮಣ್ಣಿನ ಮನೆಗಳು ಕುಸಿದಿವೆ. ಬೆಳೆ ನಾಶವಾಗಿದೆ.  ದನಕರುಗಳು ಸಾವಿಗೀಡಾಗಿವೆ. ಪರಿಹಾರ ತಂಡಗಳು ಪರಿಹಾರ ಕಾರ್ಯಗಳಲ್ಲಿ ತೊಡಗಿವೆ.

Post Comments (+)