ಪಾಕಿಸ್ತಾನದಲ್ಲಿ ಶಿವಾರಾಧನೆ

7

ಪಾಕಿಸ್ತಾನದಲ್ಲಿ ಶಿವಾರಾಧನೆ

Published:
Updated:

ಇಸ್ಲಾಮಾಬಾದ್(ಐಎಎನ್‌ಎಸ್): ಪಾಕ್‌ನ ಪಂಜಾಬ್ ಪ್ರಾಂತ್ಯದಲ್ಲಿರುವ ಪ್ರಾಚೀನ ಹಿಂದೂ ದೇವಾಲಯ ಕತಸ್ರಾಜ್‌ನಲ್ಲಿ ಸೋಮವಾರ ಸುಮಾರು ಆರು ವರ್ಷಗಳ ನಂತರ ಭಾರತೀಯ ಯಾತ್ರಾರ್ಥಿಗಳ ತಂಡವೊಂದು ಮಹಾಶಿವರಾತ್ರಿ ಆಚರಿಸಿತು.ಹಿಂದೂ ಪುರಾಣ ಕಥೆಗಳಲ್ಲಿ ಈ ದೇವಾಲಯವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಶನಿವಾರ ವಾಘಾ ಗಡಿ ಮೂಲಕ ಆಗಮಿಸಿದ ಸುಮಾರು 50 ಮಂದಿ ಭಾರತೀಯ ಯಾತ್ರಾರ್ಥಿಗಳ ನಿಯೋಗವು ಪಾಕ್ ನಿರ್ವಸಿತರ ಟ್ರಸ್ಟ್ ಆಸ್ತಿಗಳ ಮಂಡಳಿ ಅಧ್ಯಕ್ಷ ಆಸೀಫ್ ಹಶ್ಮಿ ಅವರನ್ನು ಭೇಟಿಯಾಯಿತು. ತಂಡವು ಗುರುವಾರ ಭಾರತಕ್ಕೆ ಮರಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry