ಶುಕ್ರವಾರ, ನವೆಂಬರ್ 22, 2019
23 °C

ಪಾಕಿಸ್ತಾನದಲ್ಲಿ ಸ್ಫೋಟ: ಅವಾಮೀ ಧುರೀಣ ಪಾರು

Published:
Updated:

ಇಸ್ಲಾಮಾಬಾದ್ (ಪಿಟಿಐ): ವಾಯವ್ಯ ಪಾಕಿಸ್ತಾನದಲ್ಲಿ ರಸ್ತೆ ಬದಿಯಲ್ಲಿ ಬುಧವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಜಾತ್ಯತೀತ ಅವಾಮೀ ನ್ಯಾಷನಲ್ ಪಾರ್ಟಿಯ (ಎಎನ್ ಪಿ) ನಾಯಕ ಫಾರೂಖ್ ಖಾನ್ ಅಲ್ಪ ಅಂತರದಲ್ಲಿ  ಪಾರಾದರು.6 ಮಂದಿಯ ಸಾವು ಹಾಗೂ ಸುಮಾರು 50 ಮಂದಿ ಗಾಯಗೊಳ್ಳಲು ಕಾರಣವಾದ ಬಾಂಬ್ ಸ್ಫೋಟ ಸಂಭವಿಸಿದ ಒಂದು ದಿನದ ಬಳಿಕ ಖಾನ್ ಕಾರನ್ನು ಗುರಿಯಾಗಿಟ್ಟುಕೊಂಡು ಈದಿನ ದಾಳಿ ನಡೆಸಲಾಗಿದೆ.
ಛರಿಸಡ್ಡಾ ಜಿಲ್ಲೆಯ ಸರ್ಧೇರಿ ಪ್ರದೇಶಲ್ಲಿನ ತಮ್ಮ ಮನೆಯಿಂದ ಹೊರ ಬರುತ್ತಿದ್ದಂತೆಯೇ ಖಾನ್ ಕಾರಿನ ಮೇಲೆ ದೂರ ನಿಯಂತ್ರಿತ ಬಾಂಬ್ ಎಸೆಯಲಾಯಿತು. ಸ್ಥಳೀಯ ಕಾಲಮಾನ ಬೆಳಿಗ್ಗೆ 10.45ರ ವೇಳೆಗೆ ಪಕ್ಷದ ಮುಖ್ಯಸ್ಥ ಅಸ್ಫಂಡ್ಯಾರ್ ವಲಿ ಖಾನ್ ಪರ ಪ್ರಚಾರಕ್ಕಾಗಿ ಹೊರಟಾಗ ಖಾನ್ ಕಾರಿನ ಮೇಲೆ ಬಾಂಬ್ ದಾಳಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಪೊಲೀಸ್ ಅಧಿಕಾರಿಗಳು ತಿಳಿಸಿದರು.ಖಾನ್ ಅವರಿಗೆ ತರಚಿದ ಗಾಯಗಳಾಗಿದ್ದು, ಆಸ್ಪತ್ರೆಗೆ ಒಯ್ಯಬೇಕಾದ ಅಗತ್ಯ ಬರಲಿಲ್ಲ ಎಂದು ಎಎನ್ ಪಿ ಕಾರ್ಯಕರ್ತರು ತಿಳಿಸಿದರು.

ಪ್ರತಿಕ್ರಿಯಿಸಿ (+)